ಇದು ನನ್ನೂರು - The Indic Lyrics Database

ಇದು ನನ್ನೂರು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Palegara | वर्ष - 1996

Song link

View in Roman

ಬಾಣಿಗೊಬ್ಬ ಸೂರ್ಯ
ಭೂಮಿಗೊಬ್ಬ ಚಂದ್ರು
ಲೋಕಕೊಬ್ಬ ದೇವನು
ಮತ್ತಿಗೊಬ್ಬ ರಾಮ
ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನು
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ
ನ್ಯಾಯಕೊಬ್ಬ ಶೂರ ನಮ್ಮೂರ ಪಾಳೇಗಾರ

ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು
ಇರೋರು ಇರದೋರು ಎಲ್ಲರೂ ನನ್ನ ಬಂದು ಬಂದವರು
ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು

ನ್ಯಾಯ ಯಾರನು ನಿಂದಿಸದು
ಹುಲಿಯ ವೇಷದ ಗೋವು ಅದು
ಸತ್ಯ ಯಾರನು ನೋಯಿಸದು
ಪಾಪ ತೊಳೆಯುವ ಗಂಗೆ ಅದು

ನೀತಿಗೊಬ್ಬ ತಮ್ಮ ಸೇವೆಗೊಬ್ಬ ತಿಮ್ಮ
ಕಂತೆಗೊಬ್ಬ ಬ್ರಹ್ಮ
ವೇದಕೊಬ್ಬ ವ್ಯಾಸ ಕಾಡಿಗೊಬ್ಬ ದಾಸ
ಕಾಸಿಗೊಬ್ಬ ಶ್ರೀನಿವಾಸ
ಕೋಟಿಗೊಬ್ಬ ಶೂರ ನಮ್ಮೂರ ಪಾಳೇಗಾರ
ನ್ಯಾಯಕೊಬ್ಬ ಧೀರ ನಮ್ಮೂರ ಪಾಳೇಗಾರ

ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು
ನಾಗೋರು ನೊಂದವರು ಎಲ್ಲರೂ ನನ್ನ ಬಂಧು ಬಾಂಧವರು
ಇದು ನನ್ನೂರು ಎಲ್ಲರೂ ನನ್ನೋರು
ಇದು ನನ್ನೂರು ಎಲ್ಲರೂ ನನ್ನೋರು

ನ್ಯಾಯ ಎಂದರೇ ಸಮಭಾವ
ತೂಗೋ ತಕ್ಕಡಿ ನನ್ನ ಜೀವ
ಸತ್ಯ ಎಂದರೇ ನಿಜ ರೂಪ
ತೋರೋ ಕನ್ನಡಿ ನನ್ನ ರೂಪ

ತಾಯಿ ಮಾತಿಗೊಬ್ಬ
ತಾಯಿ ಭಾಷೆಗೊಬ್ಬ
ತಾಯಿ ನಾಡಿಗೊಬ್ಬ

ಪ್ರೇಮಾ ಸೇವೆಗೊಬ್ಬ
………………………………
ಶಾಂತಿ ಮೋರ್ತಿಗೊಬ್ಬ

ನೇರ ಮಾತುಗಾರ ನಮ್ಮೂರ ಪಾಳೇಗಾರ
ನ್ಯಾಯ ಸೂತ್ರಧಾರ ನಮ್ಮೂರ ಪಾಳೆಗಾರ

ಇದು ನಮ್ಮೂರು ಎಲ್ಲರೂ ನಮ್ಮೋರು
ಇದು ನಮ್ಮೂರು ಎಲ್ಲರೂ ನಮ್ಮೋರು
ಇರೋರು ಇರದೋರು ಎಲ್ಲರೂ ನನ್ನ ಬಂದು ಬಂದವರು
ಇದು ನಮ್ಮೂರು ಎಲ್ಲರೂ ನಮ್ಮೋರು
ಇದು ನಮ್ಮೂರು ಎಲ್ಲರೂ ನಮ್ಮೋರು

ಬಾಣಿಗೊಬ್ಬ ಸೂರ್ಯ
ಭೂಮಿಗೊಬ್ಬ ಚಂದ್ರು
ಲೋಕಕೊಬ್ಬ ದೇವನು
ಮತ್ತಿಗೊಬ್ಬ ರಾಮ
ಪ್ರೀತಿಗೊಬ್ಬ ಶ್ಯಾಮ
ದಾನಕೊಬ್ಬ ಕರ್ಣನು
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ
ನ್ಯಾಯಕೊಬ್ಬ ಶೂರ ನಮ್ಮೂರ ಪಾಳೇಗಾರ