ಸಿಂಗಾರ ಸಿರಿಯೇ - The Indic Lyrics Database

ಸಿಂಗಾರ ಸಿರಿಯೇ

गीतकार - Pramod Maravanthe | गायक - Vijay Prakash, Ananya Bhat, Nagraj Panar Valtur (folk) | संगीत - Rishab Shetty | फ़िल्म - Kantara | वर्ष - 2022

Song link

View in Roman

“ಭತ್ತ ತೊಳು ಕೈಗೆ
ಬಯಣಿ ಮುಳ್ಳ್ ಹೆಟ್ಟಿತ್
ಮದಿಗ್ ಹೋದ ಅಣ್ಣ ಬರಲಿಲ್ಲ
ಮದಿಗ್ ಹೋದ ಅಣ್ಣ ಬರಲಿಲ್ಲ…ಬಸರೂರ
ಹೂವ ಕಂಡನ್ನ ತಗದೀರ್”

ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಅಗೆವ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
ಮಂದಹಾಸ ಆಹಾ
ನಲುಮೆಯಾ ಶ್ರಾವಣ ಮಾಸ

ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹದ ಮದರಂಗಿ
ಕನ್ನ ಹಾಕಿದೆ ಮುಂಗುರುಳ ಸೋಕಿ

“ನಾಗರ ಬಲ್ಯಡಿ ನಾಗನ ದರುಶಿನ
ಇಡೀನಿ ನಾರಿಯರೆ ಬನಕ್ ಹೂಗ್
ಇಡೀನಿ ನಾರಿಯರೆ ಬನಕ್ ಹೂಗ್.. ಬನದ್ ಒಡತಿ
ಬೇಡಿದ್ ವರವನ್ನೆ ಕೊಡುವಳು..”

ಮಾತಾಡುವ ಮಂದಾರವೇ
ಕಂಗೊಳಿಸಬೇಡಾ ಹೇಳದೇ
ನಾನೇತಕೆ ನಿನಗ್ಹೇಳಲಿ
ನಿನ್ನ ಮೈಯ ತುಂಬಾ ಕಣ್ಣಿದೆ

ಮನದಾಳದ ರಸ ಮಂಚದೀ
ರಂಗೇರಿ ನಿನ್ನ ಕಾದಿದೆ
ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡು ಬಾ ಕ್ವಂಗಾಟವ..

ಕಣ್ಣಿಗೆ ಕಾಣೋ ಹೂಗಳೆಲ್ಲ
ಏನೋ ಕೇಳುತಿವೆ
ನಿನ್ನಯ ನೆರಳ ಮೇಲೆಯೆ ನೂರು
ಚಾಡಿ ಹೇಳುತಿವೆ

ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ

 

ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ?

ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡು ಬಾ ಕ್ವಂಗಾಟವ..

ಸುಂದರವಾದ ಸೋಜಿಗವೆಲ್ಲಾ
ಕಣ್ಣಾ ಮುಂದೆ ಇದೆ
ಬಣ್ಣಿಸಬಂದ ರೂಪಕವೆಲ್ಲಾ
ತಾನೇ ಸೋಲುತಿದೆ

ಮಂದಹಾಸ ಆಹಾ
ನಲುಮೆಯಾ ಶ್ರಾವಣ ಮಾಸ..