ಕಂಡೆ ಹರಿಯ ಕಂಡೆ - The Indic Lyrics Database

ಕಂಡೆ ಹರಿಯ ಕಂಡೆ

गीतकार - Hunsur Krishnamurthy | गायक - P. B. Sreenivas | संगीत - G. K. Venkatesh | फ़िल्म - Bhakta Kumbara | वर्ष - 1975

Song link

View in Roman

ಕಂಡೆ ಹರಿಯ ಕಂಡೆ
ಕಂಡೆ ಹರಿಯ ಕಂಡೆ
ದೇವಾಧಿ ದೇವ
ಧನುಜಾದಿ ವನ್ದ್ಯ ದಾರನೀಶಾನ
ದಿವ್ಯ ಚರಣ ಕಮಲ ಯುಗವಾ

ಪಾವನವಾಯಿತು ಕುಲಕೋಟಿಗಳು
ಪುಟಿದು ಹೋದವು ಪರಿತಾಪಗಳು..
ಪುಟಿದು ಹೋದವು ಪರಿತಾಪಗಳು
ಬೇರೆನೂ ಬೇಕಿಲ್ಲ ಸಾಕು ಇದುವೇ ಅನಂತ ಭಾಗ್ಯ
ಕಂಡೆ ಹರಿಯ ಕಂಡೆ

ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಈ ಜೀವ ಜೊತೆಯಲ್ಲಿ ಪರಮಾತ್ಮ ಕಲೆತು
ಒಳಗೂ ಹೊರಗೂ ಬೆಳಗುವ ಹಾಗೆ
ಸಖಿಯರ ಒಡನೆ ಕುಣಿಯುವ ಹರಿಯ
ಚರಣ ಕಿಂಕಿನೀ ನಾದದ ಇಂಪು
ರಾಗ ಭಾವಗಳು ಬೀಸೆದಿಹ ಸೊಂಪು
ಮಂದಹಾಸದಲಿ ನಿಂದ ಲಾಸ್ಯದಲಿ
ಕುಣಿದು ಕುಣಿಸೋ ಕಲಾಪವನ್ನೇ
ಕಂಡೆ ಹರಿಯ ಕಂಡೆ

ಅಸಮಾನ ಕಲೆಗಾರ ಇವ ನಮ್ಮ ವಿಠ್ಠಲ
ರಸವಂತ ಗುಣವಂತ ಶೃಂಗಾರ ಲೋಲಾ
ಯೋಗಿಯೋ ಭೋಗಿಯೋ ಬಲವರಿಲ್ಲ
ರಸಿಕ ರಂಗನ ಅನಂಗಪಿತನ
ಹಾವ ಭಾವಗಳೊಳಗಿನ ಮರ್ಮ
ತಿಳಿದು ನಾನಿಂದು ತಾಳೆದೆ ಆನಂದ
ಪ್ರಾಣವ ಬೆರೆತ ವಿಹಾರವನ್ನೇ

ಕಂಡೆ ಹರಿಯ ಕಂಡೆ
ದೇವಾಧಿ ದೇವ
ಧನುಜಾದಿ ವನ್ದ್ಯ ದಾರನೀಶಾನ
ದಿವ್ಯ ಚರಣ ಕಮಲ ಯುಗವಾ
ಕಂಡೆ ಹರಿಯ ಕಂಡೆ