ಭೂದೇವಿ ನೆತ್ತಿ ಮೇಲೆ ಸಿಂಧೂರವೇ - The Indic Lyrics Database

ಭೂದೇವಿ ನೆತ್ತಿ ಮೇಲೆ ಸಿಂಧೂರವೇ

गीतकार - K. Kalyan | गायक - S. P. Balasubrahmanyam, K. S. Chithra | संगीत - K. Kalyan | फ़िल्म - Shrirasthu Shubhamasthu | वर्ष - 2000

Song link

View in Roman

ಸೈಯ್ಯಯ್ಯ ಯಯ್ಯ ಸೈಯ್ಯಯ್ಯ ಯಯ್ಯ ಸೈಯ್ಯಯ್ಯ ಯಯ್ಯ |೩|

ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೇಯೋ ಮುತ್ಸಂಜೆಯೋ ಪ್ರೀತಿಃ
ಮುಂದೆ ನಮ್ಮ ಪ್ರೀತಿ ಒಂದೇ

ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ

ಓಹೋಹೋ ಓಹೋಹೋ ಹೋಯ್ ಹೋಯ್ ಹೊಯ್ಯೆ ಹೊಯ್ಯೆ

ಬಾಣಗಳ ಉಪ್ಪರಿಗೆಯಲಿ ತಾರೆಗಳ ಕೊಪ್ಪರಿಗೆ
ಒಂದೊಂದೇ ಯೆನಿಸಿ ಕೊಡುವೆ ಗುಣಿಸಿ ಕೊಡಬಲ್ಲೆಯ

ತಂಗಾಳಿ ತಪ್ಪಲಿನೊಳಗೆ ನಾ ನಿನ್ನ ತೆಕ್ಕೆಯೊಳಗೆ
ಕನಸುಗಳ ಎನಿಸುತ್ತಿರುವೆ ತಾರೆಗಳು ಯಾಕಯ್ಯ
ಬಂಗಾರದ ಹೆಣ್ಣೆ ಹೇಳೆ ನೀನು ವಸಂತನ ಹೆಣ್ಣೆ
ವಸಂತನ ಮುಂದೆ ಯೆಂದು ನಾನು ಕರಗುವ ಬೆಣ್ಣೆ

ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ

ಮುತ್ಸಂಜೆ ಕೆಂಪಿನಳ್ಳಿ ಊರಾಚೆ ಕಣಿವೆಯಲ್ಲಿ
ಬರೆದಿಟ್ಟೆ ನಿನ್ನ ಹೆಸರ ಜರತಾರಿ ಅಂಚಲ್ಲಿ
ಮುಂಜಾನೆ ಮಬ್ಬಿನಳ್ಳಿ ಮಂಜಿನ ಬಿಳುಪಿನಳ್ಳಿ
ಉಸಿರಲ್ಲೇ ಪಡೆದೆ ನಿನ್ನ ಓಡಾಗೋ ನೆಪದಲ್ಲಿ

ದಿಕ್ಸೂಚಿ ಕಣ್ಣೋನೆ ನೀನು ನೋಡೋ ಕಣ್ಣಲ್ಲೇ ನಾನಿರುವೆ
ಮುನ್ಸೂಚಿ ಮನಸೋಲೆ ನೀನು ನೀಡೋ ಮನಸಲ್ಲೇ ನಾನಿರುವೆ

ಭೂದೇವಿ ನೆತ್ತಿ ಮೇಲೆ ಸಿಂಧೂರವೇ
ಈ ಪ್ರೇಮ ಸಿಂಧೂರಕ್ಕೆ ನಾ ಕಾಯುವೆ
ಮುಂಜಾನೇಯೋ ಮುತ್ಸಂಜೆಯೋ ಪ್ರೀತಿಃ
ಮುಂದೆ ನಮ್ಮ ಪ್ರೀತಿ ಒಂದೇ