ಶೃಂಗಾರದ ಹೊಂಗೆಮರ - The Indic Lyrics Database

ಶೃಂಗಾರದ ಹೊಂಗೆಮರ

गीतकार - Yogaraj Bhat | गायक - Vijay Prakash | संगीत - V Harikrishna | फ़िल्म - Panchatantra | वर्ष - 2019

Song link

View in Roman

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ
ಕಳ್ಳಾಟಕೆ ಮಳ್ಳ ಮನ ಚೀ ಅಂದಿದೆ
ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ಬೆನ್ನಿಗೆ ಬೆರಳು ಸೋಕಿ
ಕಣ್ಣೆರಡು ಕೇಳಿವೆ ಬಾಕಿ
ಇದು ತುಂಟ ಮೌನಾಚರಣೆಯು

ಸ್ಪರ್ಶವೂ ಕೇಳಿದೆ ಕೊಂಚ
ಉಷ್ಣಾಂಶದ ಬೆಚ್ಚನೆ ಲಂಚ
ಶುರು ಜಂಟಿ ಕಾರ್ಯಾಚರಣೆಯು

 

ಗೊತ್ತಿದ್ದೂ ದಾರಿ ತಪ್ಪಿದಾಗ ಬೆವರಿನ ಹನಿಯೂ
ಹುಚ್ಚೆದ್ದು ಹಾಡು ಹೇಳಬಹುದೇ ಒಳಗಿನ ದನಿಯು

ಇದು ಆವೇಗದ ಆಲಿಂಗನ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ

ನಲ್ಮೆಯಲ್ಲೆಲ್ಲವೂ ಚಂದ
ಮನ್ಮಥನ ಹಾವಳಿಯಿಂದ
ಬಚಾವಾದರೇನು ಸುಖವಿದೆ

ಬಿಚ್ಚಿದ ಕೂದಲ ಘನತೆ
ಅರೆ ಮುಚ್ಚಿದ ಕಂಗಳ ಕವಿತೆ
ಪ್ರಣಯಕೊಂದು ಬೇರೆ ಮುಖವಿದೆ

ಕಡು ಮೋಹದಲ್ಲಿ ಗಡಿಯ ರೇಖೆಗೆಲ್ಲಿದೆ ಬೆಲೆಯು
ತಿಳಿಗೇಡಿಯಾಗದೇನೆ ಸಿಗದು ತೋಳಿಗೆ ನೆಲೆಯು

 

ರತಿ ರಂಗೇರಲು ಪ್ರತಿ ಕ್ಷಣ
ಹೋಗಿ ಬಂತು ಪ್ರಾಣ

ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ನಾಚಿಕೆ ನಮ್ಮ ಜೊತೆ ಟೂ ಬಿಟ್ಟಿದೆ
ಕಳ್ಳಾಟಕೆ ಮಳ್ಳ ಮನ ಚೀ ಅಂದಿದೆ
ಚೆಲ್ಲಾಟಕೆ ಚೆಲುವು ಹೂ ಎಂದಿದೆ

ಇಬ್ಬರ ಕಾಮನೆ ನೂರು
ತುಟಿ ಗಾಯಕೆ ಕಾರಣ ಯಾರು
ಇದು ಗೊತ್ತಿಲ್ಲದ ರೋಮಾಂಚನ
ಹೋಗಿ ಬಂತು ಪ್ರಾಣ