ನನ್ನ ಮಣ್ಣಿದು - The Indic Lyrics Database

ನನ್ನ ಮಣ್ಣಿದು

गीतकार - S. Narayan | गायक - Shankar Mahadevan | संगीत - S. Narayan | फ़िल्म - Veeraparampare | वर्ष - 2010

Song link

View in Roman

ನನ್ನ ಮಣ್ಣಿದು ನನ್ನ ಮಣ್ಣಿದು
ನನ್ನ ಮಣ್ಣಿದು ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು
ವಿಶ್ವಮಾನವದಿ ಸಾರಿದ ಮಣ್ಣು
ಕನ್ನಡದಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ…2x

ಕನ್ನಡ ಕವಿಗಳ ಸಾಲುಗಳು
ನಿನ್ನ ಕಣ್ಣಿಗೆ ಕಾಡಿಗೆಯು
ಜ್ಞಾನ ಪೀಠದ ಗೌರವವೂ
ತಾಯೆ ನಿನಗೆ ಸಿಂಧೂರವು

ಜನಪದ ಕಲೆಗಳ ಸಿಂಚನವೇ
ಕನ್ನಡಾಂಬೆಯ ಕೈಬಳೆಯು
ಮನುಕುಲ ಮೆಚ್ಚುವ ನಾಟ್ಯಕಲೆ
ಅವಳ ಕಾಲ್ಗಳಿಗೆ ಅರ್ಪುಗೆಯು

ಮಲೆನಾಡ ಹಸಿರಸಿರಿ
ನಿನ್ನ ಒಡಲಿಗೆ ಉಡುಗೆಗಳು
ಶಿಲ್ಪಿಗಳ ಶಿಲ್ಪಕಲೆ
ಮಾತೇ ನಿನಗೆ ಒಡವೆಗಳು

ಕ್ಷಮಿಸುವಾ ಮನುಜನೆ ಕನ್ನಡ ಮಣ್ಣಲಿ
ಸ್ವರ್ಗವಾ ಕಾಣುವೆ ನನ್ನ ಈ ಮಣ್ಣಲಿ
ಪುಣ್ಯದ ಮಣ್ಣಲಿ

ನನ್ನ ಮಣ್ಣಿದು, ನನ್ನ ಮಣ್ಣಿದು

ಹೋ ಸುಂದರ ಅರಣ್ಯ ಡಾಮಗಳು
ಕನ್ನಡಾಂಬೆಯ ಕೇಶಗಳು
ನೇಗಿಲ ಯೋಗಿಯ ಬೆಳೆಯಲ್ಲ
ಅವಳ ಮುಡಿಗೆ ಕುಸುಮಗಳು

ಹರಿಯುವ ನದಿಯ ನೀರೆಲ್ಲ
ಅವಳ ಎದೆಯ ಅಮೃತವೂ
ಧುಮುಕುವ ಜೋಗದ ಸಿರಿಯೆಲ್ಲಿ
ತುಂಬಿದೆ ನಗೆಯ ನರ್ತನವು

ಈ ನಾಡ ಶ್ರೀಗಂಧ ಕನ್ನಡಾಂಬೆಯ ಮಾಂಗಲ್ಯ
ಕೋಲಾರ ಕೈವಾರ ವೊಲೇ ಜುಮಿಕಿ ಮೂಗುತಿಯು

ಇದ್ದರೆ ಬದುಕುನಿ ನನ್ನ ಈ ಮಣ್ಣಲಿ
ಮಡಿದರೆ ಹೆಮ್ಮೆಯೇ ಕನ್ನಡ ಮಣ್ಣಲಿ
ಧರ್ಮದ ತೌರಲಿ

ಕನ್ನಡ ಮಣ್ಣನು ರಕ್ಷಿಸಲು
ನೆತ್ತರವನ್ನೇ ಹರಿಸಿದರು
ಈ ಕನ್ನಡ ತಾಯಿಯ ಮಡಿಲಲ್ಲಿ
ವೀರ ಮರಣವ ಹೊಂದಿದರು

 

ನೆಲ ಜಲ ರಕ್ಷಣೆ ಕಾಯಕತೆ
ಹಗಲಿರುಳು ಎನ್ನದೆ ಶ್ರಮಿಸಿದರು
ಲಾಠಿ ಬೂಟಿನ ಒದೆ ತಿಂದು
ಶತ್ರುಗಳೆದೆಯ ಮೆಟ್ಟಿದರು

ಉಪವಾಸ ಸೆರೆವಾಸ
ಎದೆಗುಂದದೆ ಮುನ್ನಗಿದರು
ಅವಮಾನ ಅದೇ ಬಹುಮಾನ
ಎಂದರು ಕನ್ನಡ ಸಿಂಹಗಳು

ಅಳಿದರು ಕನ್ನಡ ಉಳಿದರು ಕನ್ನಡ
ಎದೆಯನ್ನೇ ಸೀಳುನಿ ಹರಿವುದು ಕನ್ನಡ
ಬೋರ್ಗರೆಯುದು ಕನ್ನಡ

ನನ್ನ ಮಣ್ಣಿದು ನನ್ನ ಮಣ್ಣಿದು
ನನ್ನ ಮಣ್ಣಿದು ಕನ್ನಡ ಮಣ್ಣು
ನನ್ನುಸಿರಲ್ಲಿ ಕಂಪಿಸೋ ಮಣ್ಣು
ದಮಣಿ ದಮಣಿಯಲ್ಲಿ ನರ್ತಿಸೋ ಮಣ್ಣು
ವಿಶ್ವಮಾನವದಿ ಸಾರಿದ ಮಣ್ಣು
ಕನ್ನಡದಿ.. ಈ ಪುಣ್ಯವತಿ..
ನನ್ನಡೆದ ಸೌಭಾಗ್ಯವತಿ