ಹೆಜ್ಜೆಗೊಂದು ಹೆಜ್ಜೆ, - The Indic Lyrics Database

ಹೆಜ್ಜೆಗೊಂದು ಹೆಜ್ಜೆ,

गीतकार - Kaviraj | गायक - Tippu, Shwetha Mohan | संगीत - Manikanth Kadri | फ़िल्म - Prithvi | वर्ष - 2010

Song link

View in Roman

ಹೆಜ್ಜೆಗೊಂದು ಹೆಜ್ಜೆ,

ಜೋಡಿ ಕೂಡಿ ಸಾಗೋ ಸಂಜೆ..

ಮಧುರಾ ಸುಮಧುರಾ..

ಮ್ಯಾಟ್ ಮ್ಯಾಟ್ ಮ್ಯಾಟ್ಟೆ,

ಬೇಟಿಯಾಗುವಂತ ಹೊಟ್ಟೆ,

ಏನಿದು ಸಡಗರ..?


ಹರುಷಾ... ಒಂದೊಂದೊಂದು ನಿಮಿಷಾ..

ಕನಸಲ್ಲ ಬಹುಷ..

ಎಂಥಾ ಸ್ನೇಹಾ.. ಹ್ಹ ಹ್ಹಾ..

ಬಲು ಮೋಹಕ..!!


ಅರಿವ ಮುಂಚೆ ಅರಳಿಕೊಂಡಿದೆ,

ಎದೆಯಲೊಂದು ಹೂಬನ..

ನಿಂತಲ್ಲೇ ನೀಲಿ ಗಗನದಿ,

ನಾ ತೇಲಿ ಹೋದೆ..!!

 

ಮೋಡ ಮುತ್ತಾಗಿ ಮಳೆಗರೆವಾಗ,

ಹೂವಿನಂತೆ ಕಚಗುಳಿ..

ಖಾಲಿ ಖಾಲಿ ಹಳ್ಳಿಯಲ್ಲಿ,

ಎನೋ ಗೀಚೊ ವೆಲೆಲಿ,

ನಿನ್ನ ಚಿತ್ರವೇನೆ ಮೂಡಿಬಂತಲ್ಲಿ..!!


ಜೀವ ನಿಂಗಾಗಿ ಉಸಿರುಸಿರಳ್ಳಿ,

ಮಾಡಿದೇ ಈಗ ಚಲುವಲಿ..!!


ಹೇಳಿ ಕೇಳಿ ನಿನ್ನ ಕೈಲಿ

ಸಿಕ್ಕಿಕೊಂಡೆ ನಾನಿಲ್ಲಿ..

ಎಲ್ಲ ನಿಂದೆ ದಾಳಿ.. ಹೇಗೇ ತಾಳಲಿ..!!

 

ಹಿಡಿದು ತಂದು ಸುಮದ ಸಂತೆಗೆ..

ಎತ್ತಿಸಿದಂತೆ ಜೀವನ..

ನಿನ್ನಿಂದ ನನ್ನ ಕನಸಿಗೆ,

ನೂರಾರು ಬಣ್ಣ.. ಹೋ.. ಹೋ.... ಹೂ...!!


ದಟ್ಟ ಕಾಡಲ್ಲಿ ಜೊತೆ-ಜೊತೆಯಲ್ಲಿ,

ಕಳೆದು ಹೋಗೋಣ ಬರುವೆಯಾ..?

ಅಪ್ಪಿ-ತಪ್ಪಿ ನೀನು ನನ್ನ ಸೋಕಿದಂತ ಹೊತ್ತಲ್ಲಿ,

ಸಾವಿರಾರು ಮಿಂಚು ನನ್ನ ಮೈಯ್ಯಲಿ..!!


ನಿನ್ನ ಕಿವಿಯಲ್ಲಿ ಪಿಸುಧಾನಿಯಲ್ಲಿ,

ಗುಟ್ಟು ಹೇಳೋಕೆ ಬಿಡುವೆಯಾ..?

ಬೇಡ ಬೇಡ ಅಂದ್ರು ಕೂಡ ಕೇಳುತಿಲ್ಲ ಈ ಮನ.

ನಿನ್ನ ಕೆನ್ನೆಯೊಮ್ಮೆ ಗಿಲ್ಲಲೇನು ನಾ..?


ಬರುವ ಮುನ್ನ ಬಂದ ಹಾಗೆ, ರುತ್ತು ವಸಂತ ನನ್ನಲಿ..

ಎಲ್ಲೆಲ್ಲೋ ಎನೋ ಸೊಗಸಿದೆ.. ಈ ಮಾಯೆ ಎನೋ..!!!


ಹೆಜ್ಜೆಗೊಂದು ಹೆಜ್ಜೆ,

ಜೋಡಿ ಕೂಡಿ ಸಾಗೋ ಸಂಜೆ..

ಮಧುರಾ ಸುಮಧುರಾ..


ಮ್ಯಾಟ್ ಮ್ಯಾಟ್ ಮ್ಯಾಟ್ಟೆ,

ಬೇಟಿಯಾಗುವಂತ ಹೊಟ್ಟೆ,

ಏನಿದು ಸಡಗರ..?