ತಾಯಿ ಕೊಟ್ಟ ಸೀರೆ ಮಗಳ - The Indic Lyrics Database

ತಾಯಿ ಕೊಟ್ಟ ಸೀರೆ ಮಗಳ

गीतकार - S. Narayan | गायक - S. Janaki | संगीत - K. Kalyan | फ़िल्म - Thayi Kotta Seere | वर्ष - 1997

Song link

View in Roman

ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ
ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ

ಆಸರೆ ಇಲ್ಲಾ ತಬ್ಬಲಿ ಮಗುವಾ
ಬಿಸಿಯುಸಿರಿಗೆ ಹಾಲೆರೆವ

ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ

ಪಾಪವೆಂಬ ಬುತ್ತಿ ಹೊತ್ತ ಹೆಣ್ಣು
ಭೂಮಿಯಲ್ಲಿ ಜನ್ಮ ಪಡೆದಳು
ಮದುವೆ ಎಂಬ ಸಂತೆಯಲ್ಲಿ ಅವಳು
ಆದೋ ಕೈಗೆ ಪಗಡೆ ಯಾದಳು

ಪಥಿ ಯೆನ್ನುವ ವ್ಯಾಪಾರೀಯು
ಉರುಳ ಹಾಕಿದ ಈ ಕೊರಳಿಗೆ
ಕಣ್ಣೀರ ಸುಳಿಯಲಿ ನಾನು
ನಗುವಿನ ನೆಪದಲಿ ಅಳುತ್ತಿದೆ ಬದುಕು

ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೆ
ಮುದುಡಿ ಹೋದ ಕರುಳ ಬಳ್ಳಿಗೆ

ಹುಟ್ಟೋವಾಗ ತವರಿಗಿವಳು ದೀಪಾ
ಬೆಳಗೋ ಮನೆಗೆ ಅಳುವೆ ಇವಳ ಶಾಪ
ನೇರಳು ಕೂಡ ದೂರ ಮಾಡಿತಮ್ಮ
ಹಣದ ಮುಂದೆ ತಲೆಯ ಬಾಗಿತಮ್ಮ

ತಾಳಿ ಯೆನ್ನುವ ಗಾನದಲ್ಲಿಯು
ಬಂದಿಯಾದಳು ಈ ಅಭಲೆಯು
ಸಂಸಾರ ಸೆರೆಮನೆ ಯಾಯ್ತೆ
ಅರಗಿನ ಮನೆಯಲಿ ಕರಗಿದೆ ಬದುಕು

ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೆ ಮುದುಡಿ ಹೋದ ಕರುಳ ಬಳ್ಳಿಗೆ|2|
ಆಸರೆ ಇಲ್ಲಾ ತಬ್ಬಲಿ ಮಗು ಬಿಸಿಯುಸಿರಿಗೆ ಹಾಲೆರೆವ