ಕಣ್ಣು ಕಣ್ಣು - The Indic Lyrics Database

ಕಣ್ಣು ಕಣ್ಣು

गीतकार - Dr. V.Nagendra Prasad | गायक - Supriya Lohith | संगीत - Kadri Manikanth | फ़िल्म - Naduve Antaravirali | वर्ष - 2016

Song link

View in Roman

ಕಣ್ಣು ಕಣ್ಣು ಎದುರುಬದುರು ನಿಂತುಕೊಂಡಾಗ

ಪ್ರೀತಿ ಅನ್ನೋ ಕಷ್ಟ ಸುಖವ ಹೇಳಿಕೊಂಡಾಗ

ಹೇ ಕಣ್ಣು ಕಣ್ಣು ಎದುರುಬದುರು ನಿಂತುಕೊಂಡಾಗ
ಪ್ರೀತಿ ಅನ್ನೋ ಕಷ್ಟ ಸುಖವ ಹೇಳಿಕೊಂಡಾಗ
ಬೆಣ್ಣೆ ಅಂತ ಹೃದಯ ಯಾಕೋ ಜಾಸ್ತಿ ಮಾಡ್ತು ಕೆಲಸ
ಎಂದಿಗಿಂತ ಇಂದು ಅದರ ಓಟವೇಕೋ ರಭಸ

ಕಣ್ಣು ಕಣ್ಣು ಎದುರುಬದುರು ನಿಂತುಕೊಂಡಾಗ
ಪ್ರೀತಿ ಅನ್ನೋ ಕಷ್ಟ ಸುಖವ ಹೇಳಿಕೊಂಡಾಗ

ಓ, ಗಿಳಿಗಳ ಹಾಗೆಯೆ ಗರಿಗಳು ಅಂಟಿಕೊಂಡಂತೆ
ಹರೆಯದ ಬಾನಲಿ ಹಾರಲು ಆತುರ
ಪ್ರಣಯವು ಪರವಶ ಮಾಡುವ ಒಂದು ಮದ್ದಂತೆ
ವ್ಯಸನಿಯೇ ಆಗಲು ಜೀವಕೆ ಕಾತುರ
ಪ್ರಾಯಾನೇ ಖಾಯಿಲೆ ನಾ
ಪ್ರೀತಿನೇ ಔಷಧಿ ನಾ
ನೀ ಹೇಳೋ ಕಾರಣ ನಾ ಮನಸೇ
ಸರಸದ ಪಾಠವೆ ಮೊದಲನೇ ತರಗತಿ

ಕಣ್ಣು ಕಣ್ಣು ಎದುರುಬದುರು ನಿಂತುಕೊಂಡಾಗ
ಪ್ರೀತಿ ಅನ್ನೊ ಕಷ್ಟ ಸುಖವ ಹೇಳಿಕೊಂಡಾಗ

ಸರಸವ ಸವಿಯಲು ಕಂಗಳು ಕಾದಿವೆ
ಕಂಗಳ ಓದಲು ತುಟಿಗಳು ಕಾದಿವೆ
ತುಟಿಗಳ ವಾರ್ತೆಗೆ ಕಿವಿಗಳು ಕಾದಿವೆ
ಕಿವಿಗಳ ಮೂಲಕ ಹೃದಯವ ಸೇರಿವೆ
ಕಣ್ಣಲ್ಲೇ ರಾಯಭಾರ
ಮಾಡೋ ಎ ದಾಳಿಕೋರ
ನನ ಪಾಲಿನ ಸೋಜುಗಾರ ಒಲವೇ
ಉಸಿರಿನ ಸದ್ದಿಗೆ ಕುರ್ಚಿಯೇ ನಾಚಿದೆ