ಬೆಳ್ಳಿ ಬೆಟ್ಟದ ಮೇಲೆ ಬೆಳ್ ಮುಗಿಲ ಉಯ್ಯಾಲೆ - The Indic Lyrics Database

ಬೆಳ್ಳಿ ಬೆಟ್ಟದ ಮೇಲೆ ಬೆಳ್ ಮುಗಿಲ ಉಯ್ಯಾಲೆ

गीतकार - K. Kalyan | गायक - S. P. Balasubrahmanyam, K. S. Chithra | संगीत - K. Kalyan | फ़िल्म - Shrirasthu Shubhamasthu | वर्ष - 2000

Song link

View in Roman

ಅಚ್ಚುಮೆಚ್ಚು ಹುಡುಗೀಯ
ಅಚ್ಚುಮೆಚ್ಚು ಈ ಹುಡುಗ
ವಾಹ್ರೆ ವಾಹ್ರೆ ವಾಹ್ರೆ ವಾಹ್ನ್
ಮುಚ್ಚುಮರೆ ಯಾಕೆ ಇನ್ನು
ಬಿಚ್ಚು ನಿನ್ನ ಮನಸೀಗ
ವಾಹ್ರೆ ವಾಹ್ರೆ ವಾಹ್ರೆ ವಾಹ್ನ್

ಕಣ್ಣು ನೋಡಿ ಕೈ ಸನ್ನೆ
ಕೈಯ್ಯ ನೋಡಿ ಕಣ್ಣ್ ಸನ್ನೆ
ರೆಪ್ಪೆಯ ಅಂಚಲಿ ರೆಕ್ಕೆಯ ಬಿಚ್ಚುತ
ಇನ್ನೇನು ಹಾರುವಿರಿ

ಬೆಳ್ಳಿ ಬೆಟ್ಟದ ಮೇಲೆ ಬೆಳ್ ಮುಗಿಲ ಉಯ್ಯಾಲೆ
ಬೆಳ್ಳಿ ಮೂಡುವ ಮುಂಚೆ ಕರೆದೊಯ್’ವೆ ಕಣ್ಣಲ್ಲೆ
ನಾ ಬಲ್ಲೆ ನೀ ನಿಲ್ಲೆ ಅಂಗೈಲೆ ಆಕಾಶ ತೋರುತೀನಿ
ಓಹೋ ಓಹೋ ಓಹೋ
ಮೆಲ್ಲ ಮೆಲ್ಲ ಕದ್ದು ಮುಚ್ಚಿ ಬಾರೆ ಅಲ್ಲಿ

ಬೆಳ್ಳಿ ಬೆಟ್ಟದ ಮೇಲೆ ಬೆಳ್ ಮುಗಿಲ ಉಯ್ಯಾಲೆ

ಜೋಡಿ ಬಣ್ಣದ ಬಿಲ್ಲು ಉತ್ತರ ದಕ್ಷಿಣದಲ್ಲಿ
ಒಮ್ಮೆಲೆ ಬಂತು ಯೆನಿಂತ ಸೊಗಸು ಊ ಓಊ...
ಪ್ರೇಮ ಸಾಗರ ಕಡೆದು ಬಂದ ಕನಸುಗಳೆರಡು
ನಾನೊಂದು ಕನಸು ನೀನೊಂದು ಕನಸು ಓ ಓ ಓ ಓ...
ತಂಗಾಳಿ ಹಾಡುವ ಪದ ಯಾವ ಭಾಷೆ
ನೀ ಕೇಳೋ ಪ್ರೀತಿಗೆ ನಾ ನೀಡೋ ಭಾಷೆ
ಸಮಯ ಕಳೆಯೋ ಹೃದಯ ಹೀಗೇ ಓಓ ಓಓಓ...

ಬೆಳ್ಳಿ ಬೆಟ್ಟದ ಮೇಲೆ ಬೆಳ್ ಮುಗಿಲ ಉಯ್ಯಾಲೆ

ಈ ನಿಸರ್ಗದ ತುಂಬ ಪ್ರೇಮಿಗಳ ಪ್ರತಿ ಬಿಂಬ
ಅಡ್ಡವ ಕುಂಚ ಹೊಸ ಪ್ರಪಂಚ
ಈ ಪ್ರಪಂಚವೇ ನೀನು ನಿನ್ನ ಕುಂಚವೇ ನಾನು
ನಿಸರ್ಗ ನಮ್ಮ ಪ್ರೀತಿ ಸಂಕೇತ
ಈ ಸ್ವರ್ಗ ಸೀಮೆಯ ಕಲೆ ಯಾರ ಸ್ವಂತ
ಪ್ರೀತಿಗೆ ಸೋಲುತ ಗೆಲ್ಲೋರಿಗಂತ
ಇರುವವರೇಗೂ ಹೀಗೇ ಇರಬೇಕು

ಬೆಳ್ಳಿ ಬೆಟ್ಟದ ಮೇಲೆ ಬೆಳ್ ಮುಗಿಲ ಉಯ್ಯಾಲೆ
ಬೆಳ್ಳಿ ಮೂಡುವ ಮುಂಚೆ ಕರೆದೊಯ್’ವೆ ಕಣ್ಣಲ್ಲೆ
ನಾ ಬಲ್ಲೆ ನೀ ನಿಲ್ಲೆ ಅಂಗೈಲೆ ಆಕಾಶ ತೋರುತೀನಿ
ಓಹೋ ಓಹೋ ಓಹೋ
ಮೆಲ್ಲ ಮೆಲ್ಲ ಕದ್ದು ಮುಚ್ಚಿ ಬಾರೆ ಅಲ್ಲಿ

ಅಚ್ಚುಮೆಚ್ಚು ಹುಡುಗೀಯ
ಅಚ್ಚುಮೆಚ್ಚು ಈ ಹುಡುಗ
ವಾಹ್ರೆ ವಾಹ್ರೆ ವಾಹ್ರೆ ವಾಹ್ನ್

ಯೆಲ್ಲ ಲೋಕ ಕನಸಲ್ಲೆ
ಯೆಲ್ಲ ಸುಖ ಕನಸಲ್ಲೆ
ನಿಮ್ಮೆಲ್ಲ ಕನಸು ನನಸಾಗಿ
ಬರಲಿ ಹಿಣ್ಣೆರು ಹಾಡುತಿದೆ