ಒಲವಿನ ರುಣವ ತೀರಿಸಲೆಂತೋ - The Indic Lyrics Database

ಒಲವಿನ ರುಣವ ತೀರಿಸಲೆಂತೋ

गीतकार - Hamsalekha | गायक - K. S. Chitra, S. P. Balasubramanyam | संगीत - Hamsalekha | फ़िल्म - Halunda Thavaru | वर्ष - 1994

Song link

View in Roman

ಒಲವಿನ ರುಣವ ತೀರಿಸಲೆಂತೋ
ಹೃದಯದ ಸುಖವ ತೋರುವುದೆಂತೋ
ಮಾತಿಗೂ ಮೀರಿದ ಹಾದಿಗು ನಿಲುಕದ
ಕರುಣೆಯ ಕಡಲು ಮಮತೆಯ ಮಡಿಲು
ಮಿಂದೇನು ನಾನಿಂದು ಅಭಿಮಾನದಿ
ಒಲವಿನ ರುಣವ ತೀರಿಸಲೆಂತೋ
ಹೃದಯದ ಸುಖವ ತೋರುವುದೆಂತೋ

ನಾಕು ತುಟಿಯಲ್ಲಿಯು ಏಕ ತಾಂಬೂಲವೇ
ನಾಕು ಕಣ್ಣಲ್ಲಿ ಜೋಡಿ ತಾನುವಳ್ಳಿ
ಮೌನ ಸಂವಾದವೇ ಬೇಡ ಮರುಜನ್ಮವೇ
ಆಸೆಗೂ ಆಚಿನ ಪ್ರಾಣದ ಅಂಚಿನ
ಹರುಷದ ಹೊನಲು ಹರಿಯುತಲಿರಲು
ಮಿಂದೇನು ನಾನಿಂದು ಅಭಿಮಾನದಿ
ಒಲವಿನ ರುಣವ ತೀರಿಸಲೆಂತೋ
ಹೃದಯದ ಸುಖವ ತೋರುವುದೆಂತೋ

ಬಾಲಾ ಕಾದಂಬರೀ ಕಾವ್ಯಮಯವಾಯಿತು
ಸಹಜ ಶೃಂಗಾರ ಹೃದಯ ಸಂಸ್ಕಾರ
ಮೂಲಧನವಾಯ್ತು ಪ್ರೇಮ ವರವಾಯ್ತು
ಮದಿರೆಗು ಮತ್ತಿನ ನಿದಿರೆಗು ಮುತ್ತಿನ
ಕನಸಿನ ಮಳೆಯ ನೆನೆಯುವ ಸಮಯ
ಮಿಂದೇನು ನಾನಿಂದು ಅಭಿಮಾನದಿ

ಒಲವಿನ ರುಣವ ತೀರಿಸಲೆಂತೋ
ಹೃದಯದ ಸುಖವ ತೋರುವುದೆಂತೋ