ಸೋಜುಗಡ ಸೂಜು ಮಲ್ಲಿಗೆ - The Indic Lyrics Database

ಸೋಜುಗಡ ಸೂಜು ಮಲ್ಲಿಗೆ

गीतकार - Folk | गायक - Folk / Ananya Bhat | संगीत - Folk | फ़िल्म - Devotional / Folk | वर्ष - 2000

Song link

View in Roman

ಮಾದೇವ ಮಾದೇವ ಮಾದೇವ..

ಸೋಜುಗಡ ಸೂಜು ಮಲ್ಲಿಗೆ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ..
ಸೋಜುಗಡ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರಿ ಮುಂಡಾವರಿ ಮತ್ತೆ ತಾವರಿ ಪುಷ್ಪ
ಅಂದಾವರಿ ಮುಂಡಾವರಿ ಮತ್ತೆ ತಾವರಿ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಂಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮಾ
ಸೋಜುಗಡ ಸೂಜು ಮಲ್ಲಿಗೆ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ತಪ್ಪಲೆ ಬೆಳಗೆವ್ನೀ ತುಪ್ಪವ ಕಾಸಿವ್ನಿ
ತಪ್ಪಲೆ ಬೆಳಗೆವ್ನೀ ತುಪ್ಪವ ಕಾಸಿವ್ನಿ
ಕಿತ್ತಲೆ ಹಣ್ಣು ತಂದೀವ್ನಿ ಮಾದೇವ ನಿಂಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪಾ
ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮಗೆ
ಹೆಚ್ಚಾಳ ಗಾರ ಮಾಡೇವ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಡ ಸೂಜು ಮಲ್ಲಿಗೆ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ


ಉಚ್ಚೆಲು ಹೂವಿನಹಾಂಗೆ ಹೆಚ್ಚ್ಯಾವೋ ನಿಮ್ಮ ಪರುಸೆ
ಉಚ್ಚೆಲು ಹೂವಿನಹಾಂಗೆ ಹೆಚ್ಚ್ಯಾವೋ ನಿಮ್ಮ ಪರುಸೆ
ಹೆಚ್ಚಲಗಾರ ಮಾದೇವ ಹೆಚ್ಚಲಗಾರ ಮಾದಪ್ಪ ಬರುವಾಗ
ಹಟ್ಟಿ ಹಂಬಲವ ಮರೆತ್ಯಾರೋ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೋಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಬೆಟ್ಟ್ ಹತ್ಕೊಂಡು ಹೋಗೋರ್ಗೆ ಹತ್ತಿ ಹಂಬಲವ್ಯಕ
ಬೆಟ್ಟದ್ ಮಾದೇವ ನೀವೇ ಗತಿ ಎಂದು ಮಾದೇವ ನೀವೇ..
ಬೆಟ್ಟದ್ ಮಾದೇವ ನೀವೆ ಗತಿ ಎಂದು ಅವರಿನ್ನು
ಹಟ್ಟಿ ಹಂಬಲವ ಮರೆತ್ಯಾರೋ ಮಹದೇವ ನಿಮ್ಮಾ
ಸೋಜುಗಡ ಸೂಜು ಮಲ್ಲಿಗೆ ಮಾದೇವ
ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಸೋಜುಗಾದ ಸೂಜು ಮಲ್ಲಿಗೆ ಮಾದೇವ ನಿಮ್ಮಾ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ..