ಅಂದವೋ ಅಂದವೋ ಕನ್ನಡ ನಾಡು - The Indic Lyrics Database

ಅಂದವೋ ಅಂದವೋ ಕನ್ನಡ ನಾಡು

गीतकार - Hamsalekha | गायक - K. J. Yesudas, K. S. Chithra | संगीत - Hamsalekha | फ़िल्म - Mallige Hoove | वर्ष - 1992

Song link

View in Roman

ಅಂದವೋ ಅಂದವೋ ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವೋ ನನ್ನಯ ಗೂಡು
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು ನನ್ನ ಮನೆಯ ಅಂಗಲದಲ್ಲಿ
ಕಸ್ತೂರಿ ಮೆರೆವಲಿ ನನ್ನ ಮಡದಿ ಮಲ್ಲಿಗೆಯಲ್ಲಿ

ಅಂದವೋ ಅಂದವೋ ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು

ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿ ಬಂದರು
ನನ್ನ ರಾತಿಯ ಮೊಗವ ಮರೆ ಮಾಚದಂತ
ನಗುವ ಅವನೆಂದು ತಾರಲಿಲ್ಲವೇ ಪ್ರಿಯೆ

ನನ್ನ ಕಣ್ಣ ಮುಂದೆ ಮರ ಗಿಡದ ಮಂಡೆ ಮಂಡೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು
ಆ ರಾಗ ನೋಟ ಕಾಣದೆ ಪ್ರಿಯೆ
ಸಹ್ಯಾದ್ರಿ ಕಾಯ್ವಳು ನನ್ನ ಮನೆಯ ಕರುಣೆಯ ಮೇಲೆ
ಆಗುಂಬೆ ನಗುವಳು ನನ್ನ ಮಡದಿ ನೊಸವಿನ ವೇಳೆ

ಅಂದವೋ ಅಂದವೋ ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು

ನಲೆಗಿಂಥ ಇಂದೇ ಸಿಹಿಯಾದ ದಿವಸವಂತೆ
ಇಂದು ನಾಲೆ ಸಿಹಿಯ ಸ್ನೇಹವೆಂಬುದು
ಅಂತರಾಳವೆಂಬ ನೇತ್ರಾವತಿಯ ತುಂಬ
ಈ ಸ್ನೇಹ ಜಲದ ಸೆಲೆಯು ನಿಲ್ಲದೊ

ಉಸಿರು ಎಂಬ ಹಕ್ಕಿಯೇ ಗೂಡಿನಲ್ಲಿ ಸಿಕ್ಕಿ
ಕೂಹೂ ಕೂಹೂ ಯೆಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆ ಅರಿವ ಸತ್ಯ
ಸವಿ ಪ್ರೇಮ ದೊರೆತ ಬಾಳು ಧಾನ್ಯವೋ
ಈ ನಾಡು ನುಡಿ ಇದು ನನಗೆ ಯೆಂದು ಕೋಟಿ ರೂಪಾಯಿ
ಈ ಬಾಳ ಗುಡಿಯಲಿ ನಿಜದ ಮುಂದೆ ನಾನು ಸಿಪಾಯಿ

ಅಂದವೋ ಅಂದವೋ ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವೋ ನನ್ನಯ ಗೂಡು
ನನ್ನ ಹಾಡು ಅಲ್ಲಿದೆ ನೋಡು
ಕಾವೇರಿ ಹರಿವಳು ನನ್ನ ಮನೆಯ ಅಂಗಲದಲ್ಲಿ
ಕಸ್ತೂರಿ ಮೆರೆವಲಿ ನನ್ನ ಮಡದಿ ಮಲ್ಲಿಗೆಯಲ್ಲಿ

ಅಂದವೋ ಅಂದವೋ ಕನ್ನಡ ನಾಡು
ನನ್ನ ಗೂಡು ಅಲ್ಲಿದೆ ನೋಡು