ಕನ್ನಡ ನಾಡಿನ ರನ್ನದ ರತ್ನ - The Indic Lyrics Database

ಕನ್ನಡ ನಾಡಿನ ರನ್ನದ ರತ್ನ

गीतकार - Doddarange Gowda | गायक - S. P. Balasubrahmanyam | संगीत - Sangeetha Raja | फ़िल्म - Sharavegada Saradara | वर्ष - 1989

Song link

View in Roman

ಕನ್ನಡ ನಾಡಿನ ರನ್ನದ ರತ್ನ
ಕೇಳೋ ಕಥೆಯನ್ನಾ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯಣ್ಣ
ನಾಡನು ಕಟ್ಟಿದ ಕಥೆಯನ್ನ..

ಕನ್ನಡ ನಾಡಿನ ರನ್ನದ ರತ್ನ
ಕೇಳೋ ಕಥೆಯನ್ನಾ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ
ಹುಟ್ಟಿದ ಕಥೆಯಣ್ಣ
ನಾಡನು ಕಟ್ಟಿದ ಕಥೆಯನ್ನ..

ಒಂದನೊಂದು ಕಾಲದಲ್ಲಿ ಮಲೆನಾಡಿನ ಮಡಿಲಿನಲಿ
ಅಂಗಡಿ ಊರಿಟ್ಟು ಊರಿಗೆ ಚೆಲುವಿನ ಕಳೆಯಿತ್ತು
ಬೆಟ್ಟ ಗುಡ್ಡ ಸಾಲಿನಳ್ಳಿ ಹಸಿರಿರುವ ಬೀಡಿನಳ್ಳಿ
ವನಸಿರಿ ಮೆರೆದಿಟ್ಟು ಅಲ್ಲಿ ಶಾಂತಿಯು ನೆಲೆಸಿತ್ತು
ಪ್ರಕೃತಿಯೇ ಹೆಣ್ಣಾಗಿ ಮನುಜಗೆ ಕಣ್ಣಾಗಿ
ಧರ್ಮವೇ ಮನೆಯಾಗಿ ಮೌನವೇ ಮಾತಾಗಿ
ಅಕ್ಕರೆ ತುಂಬಿದ ಅಂಗಡಿ ಗ್ರಾಮದಿ
ಆಶ್ರಮ ಒಂದಿತ್ತು ಅದರೊಳು ಗುರುಕುಲ ನಡೆದಿತ್ತು

ಕನ್ನಡ ನಾಡಿನ ರನ್ನದ ರಥುನ ಕೇಳೋ ಕಥೆಯನ್ನ
ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ
ಹುಟ್ಟಿದ ಕಥೆಯಣ್ಣ
ನಾಡನು ಕಟ್ಟಿದ ಕಥೆಯನ್ನ..

ವೃಕ್ಷರಾಶಿ ನೇರಲಿನಲಿ ಸುದತ್ತಾಚಾರ್ಯರ ಸನ್ನಿಧಿಯಲ್ಲಿ
ಪ್ರವಚನ ಸಾಗಿತು ಧರ್ಮದ ಪ್ರವಚನ ಸಾಗಿತು..
ವಸಂತಿಕೆಯ ದೇಗುಲದಲ್ಲಿ ಶ್ರದ್ಧೆ ಭಕ್ತಿ ಸಂಗಮದಲ್ಲಿ
ಪೂಜೆಯು ನಡೆದಿಟ್ಟು ಸಲನ ಪೂಜೆಯು ನಡೆದಿತ್ತು
ಒಮ್ಮೇಗೆ ಅಬ್ಬರದ ಸದ್ದೊಂದು ಕೇಳಲು
ಅಲ್ಲಿದ್ದ ಜನರೆಲ್ಲ ಅಲ್ಲೋಲ ಕಲ್ಲೋಲ
ಹೊಂಬಿಸಿಲೆರುವ ಸುಂದರ ಸಮಯದಿ ಬಂದಿತು ಹುಲಿಯೊಂದು
ಘರ್ಜಿಸಿ ಗುಡುಗಿತು ಹುಲಿಯೊಂದು

ಕನ್ನಡ ನಾಡಿನ ರನ್ನದ ರತ್ನ
ಕೇಳೋ ಕಥೆಯನ್ನಾ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ
ಹುಟ್ಟಿದ ಕಥೆಯಣ್ಣ
ನಾಡನು ಕಟ್ಟಿದ ಕಥೆಯನ್ನ...

ಸುದತ್ತಾಚಾರ್ಯರು ಕಂಚಿನ ಕಾಂತಾಡಿ
ಸಾಲನನು ಕೂಗಿ ಕರೆದರು ಆಗ
ಆಗ್ನೇಯು ಮೊಲಗಿತು
ಗುರುಗಳ ಆಗ್ನೇಯೇ ಮೊಲಗಿತು

ವೀರಾವೇಶದ ಶೌರ್ಯದಲ್ಲಿ
ಶಿಷ್ಯನು ಸೆಣಸಿದ ರೋಷದಲ್ಲಿ
ಹುಳಿಯಾಡು ಕೇರಳಿತು
ಹಸಿದಿಹ ಹುಳಿಯಾಡು ಕೆರಳಿತು

ಓಯೇ ಸಲ.. ಓಯೇ ಸಲ.. ಓಯೇ ಸಲ..

ಆಗ ಸಾಲ ಹೊರಟಗಿ ಗಂಡುಗಲಿ ತಾನಾಗಿ
ಧೈರ್ಯದಿ ಹೊರಾಡಿ ಗೆದ್ದನು ಮುಂಡಾಗಿ
ಊರಿನ ವೀರನ ಮೆಚ್ಚುತ ಜನತೆಯು ಸಲನನು ಹರಸಿತ್ತು
ಕೆಚ್ಚೆದೆ ಸಾಲನನು ಹರಸಿತ್ತು

ಕನ್ನಡ ನಾಡಿನ ರನ್ನದ ರತ್ನ
ಕೇಳೋ ಕಥೆಯನ್ನಾ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯಣ್ಣ
ನಾಡನು ಕಟ್ಟಿದ ಕಥೆಯನ್ನ..

ಹುಲಿಯನು ಕೊಂಡ ವೀರನನ್ನು ಗುರುಗಳು ಆಗ ಹರಸಿರಲು
ಕಟ್ಟಿದ ಸಾಲನು ರಾಜ್ಯವನ್ನು ಅನುಪಮಾ ಹೊಯ್ಸಳ ರಾಜ್ಯವನ್ನು

ಹುಲಿಯನು ಕೊಳ್ಳುವ ಲಂಚನ ಹಿಡಿದು
ಗದ್ದುಗೆ ಹೆರಿ ಆಳ್ವಿಕೆ ಮೆರೆದು
ಚರಿತ್ರೆ ಮೊದಲಾಯ್ತು
ಹೊಯ್ಸಳ ಚರಿತ್ರೆ ಮೊದಲಾಯಿತು
ಸಾಹಿತ್ಯ ತೇರಗಿ ಶಿಲ್ಪಕಲೆ ನೂರಾಗಿ

ಸಂಗೀತ ಹೊನಲಗಿ ಸಂಸ್ಕೃತಿ ತೂರಗಿ
ವೈಭವ ಸಾರುವ ಹೊಯ್ಸಳ ವಂಶ ನಾದನು ಬೆಳಗಿತು
ಕನ್ನಡ ನಾಡನು ಬೆಳಗಿತು

ಕನ್ನಡ ನಾಡಿನ ರನ್ನದ ರತ್ನ
ಕೇಳೋ ಕಥೆಯನ್ನ
ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ
ಹುಟ್ಟಿದ ಕಥೆಯಣ್ಣ
ನಾಡನು ಕಟ್ಟಿದ ಕಥೆಯನ್ನ..