ಈ ಕಾಲು ನೊಂದು - The Indic Lyrics Database

ಈ ಕಾಲು ನೊಂದು

गीतकार - R. N. Jayagopal | गायक - S. P. Balasubrahmanyam | संगीत - Vijayanand | फ़िल्म - Krishna Nee Kunidaga | वर्ष - 1989

Song link

View in Roman

ಆ.. ಆ..

ಈ ಕಾಲು ನೊಂದು ಕುಣಿಯದೆ ಸೊತ್ತಾಗ
ಈ ಕಾಲು ನೊಂದು ಕುಣಿಯದೆ ಸೊತ್ತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ
ನನ್ನ ಜೀವ ಕ್ಷಣವು ನಿಲ್ಲದು
ನನ್ನ ಹಾಡು ಇನ್ನು ಕೆಲದು
ನನ್ನ ಜೀವ ಕ್ಷಣವು ನಿಲ್ಲದು
ನನ್ನ ಹಾಡು ಇನ್ನು ಕೆಲದು
ಎಲ್ಲಿ ನೀನು ಅಲ್ಲೇ ನಾನೂ
ನಾನೂ ನಿಲ್ಲೆನು

ಈ ಕಾಲು ನೊಂದು ಕುಣಿಯದೆ ಸೊತ್ತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ..

ಆ.. ಆ..

ವೀಣೆ ತಂತಿಯನು ಬೆರಳು ಮುಟ್ಟದಿರೆ ಸ್ವರವು ಬರುವೆನು
ಯಾರು ಕೊಳಲಿನಲ್ಲಿ ಉಸಿರ ತುಂಬಿರೆ ನಾಡ ತರುವೆನು
ತನುವಳ್ಳಿ ನೀನು ಉಸಿರಾದರೇ
ಉಸಿರಾದ ನೀನೆ ದೂರಾದರೇ
ಕಣ್ಣು ಕಾಣುವುದೆ ನಿಲ್ಲಲಾಗುವುದೆ ನುಡಿಯೇ ನನ್ನ ಸಿರಿಯೇ
ನಿನ್ನ ನೋಡೈರೆ ಜೀವ ನಿಲ್ಲುವುದೆ ಚೆಲುವೆ ಒಲವೇ ನುಡಿಯೆ
ಜೆನಾದ ಮನಸಿಂದು
ಕಲ್ಲೈತೋ ವಿಷವಾಯಿತೋ
ಜೆನಾದ ಮನಸಿಂದು
ಕಲ್ಲೈತೋ ವಿಷವಾಯಿತೋ
ಸ್ನೇಹವ ತೋರಿದೆ ಪ್ರೇಮವ ತುಂಬಿದೆ
ಆಸೆಯ ತೋರುತ ಕಣ್ಮರೆಯಾದೆ

ಈ ಕಾಲು ನೊಂದು ಕುಣಿಯದೆ ಸೊತ್ತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ..

ತಾನಾ ತನ್ನಾ ತಹನಾ ತನ್ನಾ..
ತನನನ ತನನ..

ಪ್ರೀತಿ ದೇವೆತೆ ಪ್ರೇಮ ಮೂರುತಿ ಮರೆಯಲಾರೆ ನಿನ್ನ
ನನ್ನ ಮನಸಿನಲಿ ನನ್ನ ಹೃದಯದಲಿ ಬೆರೆತು ಹೋದ ನಿನ್ನ
ಬದುಕಲ್ಲಿ ತಂದೆ ಹೊಸ ಸ್ಪೂರ್ತಿಯ
ನಿನ್ನಿಂದ ಕಂಡೆ ಹೊಸ ಶಾಂತಿಯ
ನನ್ನ ಕಂಬನಿಯ ಹನಿಯು ಬರೆಯುವುದು ನಮ್ಮ ಪ್ರಣಯ ಕಥೆಯ
ನನ್ನ ಸಾವಿನಲಿ ಇನ್ನು ಮರೆಯುವೆನು ಬಾಳು ತಂದ ವ್ಯಥೆಯ
ವಿಧಿರಾಯ ದಾಯೆ ತೋರು
ಸಾಕಿನ್ನು ಕಣ್ಣೀರು
ವಿಧಿರಾಯ ದಾಯೆ ತೋರು
ಸಾಕಿನ್ನು ಕಣ್ಣೀರು
ಮಾಡಿದ ಪಾಪವ ನೀಡಿದ ಶಾಪವ
ಕಾರಣ ಕಾಣೆನು ಮನ್ನಿಸು ನನ್ನನು

ಈ ಕಾಲು ನೊಂದು ಕುಣಿಯದೆ ಸೊತ್ತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ
ನನ್ನ ಜೀವ ಕ್ಷಣವು ನಿಲ್ಲದು
ನನ್ನ ಹಾಡು ಇನ್ನು ಕೆಲದು
ನನ್ನ ಜೀವ ಕ್ಷಣವು ನಿಲ್ಲದು
ನನ್ನ ಹಾಡು ಇನ್ನು ಕೆಲದು
ಎಲ್ಲಿ ನೀನು ಅಲ್ಲೇ ನಾನೂ
ನಾನೂ ನಿಲ್ಲೆನು

ಈ ಕಾಲು ನೊಂದು ಕುಣಿಯದೆ ಸೊತ್ತಾಗ
ಈ ಗೆಜ್ಜೆ ನಾದ ಕೇಳದೆ ಹೋದಾಗ..