ಅಂದದ ಮನೆಯಾ - The Indic Lyrics Database

ಅಂದದ ಮನೆಯಾ

गीतकार - Hamsalekha | गायक - Madhu Balakrishna | संगीत - Hamsalekha | फ़िल्म - Nanjundi | वर्ष - 2003

Song link

View in Roman

ಅಟ್ಟ ಅಡಿಗೆ ಅಕ್ಷಯವಾಗ್ಲಿ
ಲಕ್ಷ ಮಂದಿಗೆ ಭೋಜನವಾಗ್ಲಿ
ಲಕ್ಷ್ಮಿಪತಿಯೇ ಸತಿ ಸಮೇತ
ತಳ ಊರ್ಲಿ ಇಲ್ಲೇ ತಳ ಊರ್ಲಿ

ಅಂದದ ಮನೆಯಾ
ಚೆಂದದ ಮನೆಯಾ
ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ…

ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ ಓ ಲಕುಮಿ…

ಬೆಳಕಿಗೂ ಇಲ್ಲಿ ಬಾಗಿಲಿದೆ
ದ್ಯಾವರಿಗೂನು ಕ್ವಾಣೆ ಇದೆ
ಗಂಗೆಗೂ ಮಣ್ಣ ಗಡಿಗೆ ಇದೆ
ಬೆಂಕಿಗೂ ಬೆಚ್ಚನೆ ಗೂಡಿದೆ

ಮನಸಿದ್ದ ಹಾಗೇ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ

ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ…

ತಳಮಳಗಳನೆ ಮರೆಸಬಲ್ಲ…
ತಳಮಳಗಳನೆ ಮರೆಸಬಲ್ಲ
ಕಂದನಿಗೊಂದು ನಾಮಕರಣ
ಯೋಗವಮ್ಮ…

ಪ್ರಾಣಕೆ ಮನೆಯೇ ದೇಹವಮ್ಮ…
ಪ್ರಾಣಕೆ ಮನೆಯೇ ದೇಹವಮ್ಮ
ತನುಮನ ಧನಕು
ಆಗುಹೋಗಿಗೂ ಸೂರಿದಮ್ಮ…

ಲಾಲಿಗು ತೂಗೋ ತೊಟ್ಟಿಲಿದೆ
ಕರುಣೆಗು ಕಣ್ಣ ಬಟ್ಟಲಿದೆ
ಮನಸಿದ್ದ ಹಾಗೇ ಮನೆಯಮ್ಮ
ಅಳುವಿದ್ದ ಮನೆಗೆ ನಗುವೇ ಗುಮ್ಮ

ಅಂದದ ಮನೆಯ ಚೆಂದದ ಮನೆಯ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ..

ನಮ್ಮನೆ ಮುಂದಣ ಚಪ್ಪರದಲ್ಲಿ…
ನಮ್ಮನೆ ಮುಂದಣ ಚಪ್ಪರದಲ್ಲಿ
ರತಿ ಮನ್ಮಥರು
ಅಕ್ಷತೆಗಾಗಿ ಕಾಯಲಮ್ಮ…

ಅಂತಃಪುರವ ಸೇರಿದ ಮ್ಯಾಲೇ…
ಅಂತಃಪುರವ ಸೇರಿದ ಮ್ಯಾಲೇ
ತಪ್ಪು ಒಪ್ಪು ಹರೆಯ
ಮುಪ್ಪು ಕಾಣಲಮ್ಮ…

 

ಕಾಮನೆಗೊಂದು ಕಾಲವಿದೆ
ಸೃಷ್ಟಿಗೂ ಗರ್ಭ ಗುಡಿಯಿದೆ
ಮನಸಿದ್ದ ಹಾಗೇ ಮನೆಯಂತೆ
ನಗುವಿದ್ದ ಮನೆಗೆ ಎಲ್ಲೋ ಚಿಂತೆ

ಅಂದದ ಮನೆಯಾ ಚೆಂದದ ಮನೆಯಾ
ನಂದನ ಮಾಡೇ ಓ ಲಕುಮಿ
ನಂದನ ಮಾಡೇ… ಓ ಲಕುಮಿ…