ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ - The Indic Lyrics Database

ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ

गीतकार - Hamsalekha | गायक - Mano, K. S. Chithra | संगीत - Hamsalekha | फ़िल्म - Putnanja | वर्ष - 1995

Song link

View in Roman

ಅಮ್ಮನ ನೋಡಿರಮ್ಮ ಸಮ್ಮಾನ ಮಾಡಿರಮ್ಮ
ಹೊಟ್ಟೆಯ ತುಂಬ ಅನ್ನದ ಮಕ್ಕಳ ಹೆತ್ತವಳೆ
ಬಾಗಿನ ನೀಡಿರಮ್ಮ ಭಾಗ್ಯನ ಬೇಡಿರಮ್ಮ
ಹೊಕ್ಕಲ ಬಳ್ಳಿಗೆ ಕುಡುಗೋಳಿಟ್ಟರು ನಗ್ತಾಳೆ

ನಮ್ಮಮ್ಮ ನಮ್ಮಮ್ಮ ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ ಭೂಮಿ ತಾಯಮ್ಮ
ನಮ್ಮಮ್ಮ ನಮ್ಮಮ್ಮ ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ ಭೂಮಿ ತಾಯಮ್ಮ

ಈ ಸುಗ್ಗಿ ತಾಂಡವಳಾರಮ್ಮ ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಾಂಡವಳಾರಮ್ಮ ಭೂಮಿತಾಯಮ್ಮ
ಈ ಅಂಬಲಿ ತಾಂಡವಳಾರಮ್ಮ ನಮ್ಮಮ್ಮ ನಮ್ಮಮ್ಮ
ಇಇ ಓಕುಳಿ ತಾಂಡವಳಾರಮ್ಮ ಭೂಮಿತಾಯಮ್ಮ
ಹೋ.. ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ..

| ನಮ್ಮಮ್ಮ ನಮ್ಮಮ್ಮ ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ ಭೂಮಿ ತಾಯಮ್ಮ |2|

ಈ ಚಿನ್ನಮ್ಮ ನಮ್ಮಮ್ಮನಿಗೆ
ಮಗಳಮ್ಮ ಮಗಳಮ್ಮ
ಈ ಗಂಗಮ್ಮ ನಮ್ಮಮ್ಮನಿಗೆ ಚೊಚ್ಚಲ ಮಗಳಮ್ಮ ಹೋ ಕೆಚ್ಚಲ ಮಗಳಮ್ಮ

ಆ ಮಂಜಮ್ಮ ನಮ್ಮಮ್ಮನಿಗೆ
ತಂಗ್ಯಮ್ಮ ತಂಗ್ಯಮ್ಮ
ಈ ಗಾಳಿಯಮ್ಮ ನಮ್ಮಮ್ಮನಿಗೆ ಹತ್ತಿರದವಳಮ್ಮ ಹೋ ಬಿಟ್ಟಿರದವಳಮ್ಮ
ನಮ್ಮ ಅಮ್ಮನೂರಿನ ಬಳಗ ತುಂಬ ತುಂಬ ಕಿರಿದಮ್ಮ
ಇವಳಿಗೀಗ ಶರಣು ಶರಣು ಶರಣು ಕೋಟಿ ಶರಣಮ್ಮ

ಈ ಸುಗ್ಗಿ ತಾಂಡವಳಾರಮ್ಮ ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಾಂಡವಳಾರಮ್ಮ ಭೂಮಿತಾಯಮ್ಮ
ಈ ಅಂಬಲಿ ತಾಂಡವಳಾರಮ್ಮ ನಮ್ಮಮ್ಮ ನಮ್ಮಮ್ಮ
ಇಇ ಓಕುಳಿ ತಾಂಡವಳಾರಮ್ಮ ಭೂಮಿತಾಯಮ್ಮ
ಹೋ.. ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ..

ನಮ್ಮಮ್ಮ ನಮ್ಮಮ್ಮ ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ ಭೂಮಿ ತಾಯಮ್ಮ

ಈ ಕರಿಯ ನೇಗಿಲು ಕಟ್ಟಿದರು
ಅಚ್ಚಮ್ಮ ಮೆಚ್ಚಮ್ಮ
ಈ ಬಿಳಿಯ ಕಾಳು ಬಿಟ್ಟರು
ಬೇಡ ಏನಮ್ಮ ಬೇಡ ಇರದಮ್ಮ

ಈ ಕೆಂಚ ಗೊಬ್ಬರ ಹರವಿದರೋ
ಅಚ್ಚಮ್ಮ ಮೆಚ್ಚಮ್ಮ
ಈ ಎಡಚಾ ಕವನೆ ಬೀರಿದರು
ಪಾಪ ಏನಮ್ಮ ಕೋಪ ಇರದಮ್ಮಾ
ನಮ್ಮ ಅಮ್ಮ ಎಂದು ಎಂದು ಮೇಲು ಕೀಳು ಮಾಡಿಲ್ಲ
ಮಕ್ಕಳಾಗಿ ನಾವು ಅವಳ ಲಾಲಿ ಹಾಡಬೇಕಮ್ಮ

ಈ ಸುಗ್ಗಿ ತಾಂಡವಳಾರಮ್ಮ ನಮ್ಮಮ್ಮ ನಮ್ಮಮ್ಮ
ಈ ಹುಗ್ಗಿ ತಾಂಡವಳಾರಮ್ಮ ಭೂಮಿತಾಯಮ್ಮ
ಈ ಅಂಬಲಿ ತಾಂಡವಳಾರಮ್ಮ ನಮ್ಮಮ್ಮ ನಮ್ಮಮ್ಮ
ಇಇ ಓಕುಳಿ ತಾಂಡವಳಾರಮ್ಮ ಭೂಮಿತಾಯಮ್ಮ
ಹೋ.. ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವಾ
ಇವಳದೇನು ಕರುಣೆ ಪ್ರೀತಿಯೋ..

ನಮ್ಮಮ್ಮ ನಮ್ಮಮ್ಮ ನಮ್ಮಮ್ಮ ನಮ್ಮಮ್ಮ
ಭೂಮಿ ತಾಯಮ್ಮ ಭೂಮಿ ತಾಯಮ್ಮ