ನೀರಿನಂತೆ ನಿರ್ಮಲ - The Indic Lyrics Database

ನೀರಿನಂತೆ ನಿರ್ಮಲ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Navathare | वर्ष - 1991

Song link

View in Roman

ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾಣನಂತೇ ನಿಶ್ಚಲ

ಎಲೆಯ ಬಿಸಿಲಲಿ ಮಳೆಯ ಹನಿಯಲಿ ಪ್ರೇಮಾ.. ಪ್ರೇಮಾ..
ಎದೆಯ ಗೂಡಲಿ ಮಧುರ ನೆನಪಲಿ ಪ್ರೇಮಾ.. ಪ್ರೇಮಾ..
ಪ್ರೇಮ ಅಳಿಯದು ಪ್ರೇಮ ಮರೆಯದು ಎಂದು ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು ಪ್ರೇಮ ನೆಲೆಸಿರಲಿ

ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾಣನಂತೇ ನಿಶ್ಚಲ

ಕಣ್ಣಿಂದ ನೋಟವೋ
ನೋಟದಿಂದ ಸ್ನೇಹವೋ
ಸ್ನೇಹದಿಂದ ಸ್ಪರ್ಶವೋ
ಸ್ಪರ್ಶದಿಂದ ಹರ್ಷವೋ
ಆಗ ಪ್ರೇಮ ವರ್ಷವೋ

ಕೊರೆವ ಚಳಿಯಲಿ ಬೆರೆವ ತಾನುವಲಿ ಪ್ರೇಮ.. ಪ್ರೇಮ..
ಬೆಂಕಿ ಎದುರುಲಿ ಬೆಣ್ಣೆ ಮನದಲಿ ಪ್ರೇಮ.. ಪ್ರೇಮ..
ಮಾಗಿ ರುತುವಲಿ ಭೋಗಿ ರಥದಲಿ ಜೋಡಿ ಪಯಣವಿಡು
ಭೂಮಿ ಬಿರಿಯಲಿ ಸಾವೆ ಕರೆಯಲಿ ಬೇರೆ ಆಗದಿದು

ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾಣನಂತೇ ನಿಶ್ಚಲ