ತಾಯಿನೇ ಇಲ್ಲಾಂತ ತಾವರ್ಯಾಕೆ ತಂಗಿ - The Indic Lyrics Database

ತಾಯಿನೇ ಇಲ್ಲಾಂತ ತಾವರ್ಯಾಕೆ ತಂಗಿ

गीतकार - Hamsalekha | गायक - C. Ashwath | संगीत - Hamsalekha | फ़िल्म - Halunda Thavaru | वर्ष - 1994

Song link

View in Roman

ತಾಯಿನೇ ಇಲ್ಲಾಂತ ತಾವರ್ಯಾಕೆ ತಂಗಿ
ತಪ್ಪಿಯು ತಂಗಬೇ ಹಂಗಿನ ತುತ್ತನು ನುಂಗಬೇಡ
ಊ ಮನೆಮಗಳೇ ಇದು ಬಾಳ ಕಟ್ಟಲೆ
ಊ ಕುಲಮಗಳೆ ಇದು ಬಾಳ ಕಟ್ಟಲೆ
ತಾಯಿನೇ ಇಲ್ಲಾಂತ ತಾವರ್ಯಾಕೆ ತಂಗಿ
ತಪ್ಪಿಯು ತಂಗಬೇ ಹಂಗಿನ ತುತ್ತನು ನುಂಗಬೇಡ

ಎಲೆ ಮೇಲೆ ಮುತ್ತೀನಂಗೆ ಅಂತದಂಗೆ ಇರಬೇಕು
ಉಟದಾಗೆ ಕರಿಬೇವ ಮಡಿ ಎಸೆದರು ನಗಬೇಕು
ಮನೆಮಗಳು ಬಾಗಿಲಲ್ಲಿ ಬಂದಾರೆ
ಎದೆ ಬಾಗಳು ಮುಚ್ಚುತಾರೆ
ಬೀದಿ ಬಸವ ಬಂದು ನಿಂತ್ರೆ
ಕಾಸು ಹಾಲು ಬಟ್ಟೆನಾರ ಹಾಕುತಾರೆ

ಬಂಡುಗಲು ಬಂಧುರಾ
ಬಂದುಗಳು ಬಂಧುರಾ ಬಂಧಗಳು ಬಂಧುರಾ
ನಂಬಬೇಡ ಎಚ್ಚರ ತುಂಬ ಎಚ್ಚರ
ಅಮ್ಮನೇ ಇಲ್ಲದಿರೋ ಅರಮನೆ ಯಾಕೆ
ಆಳಾಗಿ ಬಾಳಬೇಡ ಬಾಗಿಲ ಧೂಳಾಗಿ ಕೂರಬೇಡ

ಊ ಮನೆಮಗಳೇ ಇದು ಬಾಳ ಕಟ್ಟಲೆ
ಊ ಕುಲಮಗಳೆ ಇದು ಬಾಳ ಕಟ್ಟಲೆ
ತಾಯಿನೇ ಇಲ್ಲಾಂತ ತಾವರ್ಯಾಕೆ ತಂಗಿ
ತಪ್ಪಿಯು ತಂಗಬೇ ಹಂಗಿನ ತುತ್ತನು ನುಂಗಬೇಡ

ಬೆಲ್ಲವಿದ್ರೆ ಬರುತರೆ ಕಾಲನು ಕೈಯನು ನೆಕ್ಕುತಾರೆ
ನಮ್ಮ ಕೈಯ್ಯ ಹಚ್ಚಿದಾಗ ಕಾಲಿಗೆ ಬುದ್ಧಿಯ ಹೇಳುತಾರೆ
ಅಮ್ಮನಿತ್ತ ಬಾಯಿ ತುತ್ತ ರುಚಿಯ ಶುಚಿಯ ನೆನಿಬೇಕು
ಲೋಕವಿತ್ತ ವಿಷಮುತ್ತ ಮಗಳೇ ಮರಿಯದೆ ಮರಿಬೇಕು

ಬಂಡುಗಲು ಬಂಧುರಾ
ಬಂದುಗಳು ಬಂಧುರಾ ಬಂಧಗಳು ಬಂಧುರಾ
ನಂಬಬೇಡ ಎಚ್ಚರ ತುಂಬ ಎಚ್ಚರ
ಬಂದುನೆ ಇಲ್ಲಾಂತ ಬೀದಿಯಾಕೆ ತಂಗಿ
ಬೆಡಗಿ ಬಾಳಬೇಡ ಚಿಂತೆಗೆ ಈಡಾಗಿ ಅಳಬೇಡ

ಊ ಮನೆಮಗಳೇ ಇದು ಬಾಳ ಕಟ್ಟಲೆ
ಊ ಕುಲಮಗಳೆ ಇದು ಬಾಳ ಕಟ್ಟಲೆ
ತಾಯಿನೇ ಇಲ್ಲಾಂತ ತಾವರ್ಯಾಕೆ ತಂಗಿ
ತಪ್ಪಿಯು ತಂಗಬೇ ಹಂಗಿನ ತುತ್ತನು ನುಂಗಬೇಡ
ತಪ್ಪಿಯು ತಂಗಬೇ ಹಂಗಿನ ತುತ್ತನು ನುಂಗಬೇಡ