ರಾಜಾ ಮುದ್ದು ರಾಜಾ - The Indic Lyrics Database

ರಾಜಾ ಮುದ್ದು ರಾಜಾ

गीतकार - Chi. Udaya Shankar | गायक - P. B. Sreenivas, S. Janaki | संगीत - G. K. Venkatesh | फ़िल्म - Sampathige Savaal | वर्ष - 1974

Song link

View in Roman

ರಾಜಾ ಮುದ್ದು ರಾಜಾ
ನೂಕುವಂಥ ಕೋಪ ನನ್ನಲ್ಲೇಕೆ
ಸಾರಸದ ವೇಳೆ ದೂರ ನಿಲ್ಲ ಬೇಕೆ ಕೋಪವೇಕೆ
ನಿಂಗಾಗಿ ಬಂದೆ ಒಲವನು ತಂದೆ
ನಾನೆಲ್ಲ ನಿಂದೆ

ರಾಜಾ ಮುದ್ದು ರಾಜಾ
ನೂಕುವಂಥ ಕೋಪ ನನ್ನಲ್ಲೇಕೆ
ಮುದ್ದು ರಾಜ

ಒಲಿದು ಬಂದಾ ನನ್ನ ಬೇಡಂದರೆನು ಚೆನ್ನ
ರಾಜಾ ನನ್ನ ರಾಜಾ
ಒಲಿದು ಬಂದಾ ನನ್ನ ಬೇಡಂದರೆನು ಚೆನ್ನ ರಾಜಾ
ಆಸೆಬಾರದೆನು ನಾನಂದವಿಲ್ಲವೆನು
ಮನಸಿನ್ನು ಕಲ್ಲೇನು

ರಾಜ ಬೇಡ ರಾಜಾ
ನೂಕುವಂಥ ಕೋಪ ನನ್ನಲ್ಲೇಕೆ
ಮುದ್ದು ರಾಜ

ಹಣದ ಸೊಕ್ಕಿನಿಂದ ಮೆರೆದಾದೋ ನಿನ್ನ ಚಂದ
ಬಲ್ಲೆ ನಾ ಬಲ್ಲೆ
ಹಣದ ಸೊಕ್ಕಿನಿಂದ ಮೆರೆದಾದೋ ನಿನ್ನ ಚಂದ
ಬಲ್ಲೆ..
ಬೆಂಕಿಯಂತೆ ನಾನು ತಣ್ಣೀರಿನಿಂದ ನೀನು
ನೀ ನನ್ನ ಜೊತೆಯೇನು
ನಿಲ್ಲೆ ದೂರ ನಿಲ್ಲೆ

ಗಂಡು ಬೀರಿಲ್ಲ
ನಾ ಹಿಂದಿನಂತೆ ಇಲ್ಲಾ
ನಲ್ಲ ನನ್ನ ನಲ್ಲಾ..
ಗಂಡು ಬೀರಿಲ್ಲ
ನಾ ಹಿಂದಿನಂತೆ ಇಲ್ಲಾ
ನಲ್ಲಾ..
ತಂದೆ ಮಾತ ತಲ್ಲಿ
ನಾನ್ ಓದಿಬಂದೆನಲ್ಲಾ
ನಿನ್ನಾನೆ ಸುಳ್ಳಲ್ಲ

ರಾಜಾ ಮುದ್ದು ರಾಜಾ
ನೂಕುವಂಥ ಕೋಪ ನನ್ನಲ್ಲೇಕೆ
ಮುದ್ದು ರಾಜ

ನನ್ನಲೇನು ಮೋಹ
ಇದೇನು ನಿನ್ನ ಸ್ನೇಹ
ಇಲ್ಲಾ ಸಾರಿ ಅಲ್ಲಾ

ನಮ್ಮ ಒರಲೆಲ್ಲಾ ಗಂಡು ಒಬ್ಬನು ಹುಟ್ಟಿಲ್ಲ
ಅದಕಾಗೆ ಬಿಡಲಾರೆ
ವೆರಾ ಹಮ್ಮೀರ
ರಾಜಾ ಮುದ್ದು ರಾಜಾ
ನೂಕುವಂಥ ಕೋಪ ನನ್ನಲ್ಲೇಕೆ

ಪ್ರೀತಿ ಇಂದ ಮೈಯ್ಯ ಬಲಸಬೇಕೆ
ಇನ್ನು ಸಾಕೆ
ಸಾಕೆ ಇಲ್ಲಾ ಬೇಕೆ
ಸಾಕೆ ಇಲ್ಲಾ ಬೇಕೆ