ತಾಳೆ ಹೂವ ಯೆಡೆಯಿಂದ - The Indic Lyrics Database

ತಾಳೆ ಹೂವ ಯೆಡೆಯಿಂದ

गीतकार - Chi. Udaya Shankar | गायक - S. P. Balasubrahmanyam, P. Susheela | संगीत - K. Chakravarthy | फ़िल्म - Khaidi | वर्ष - 1984

Song link

View in Roman

ತಾಳೆ ಹೂವ ಯೆಡೆಯಿಂದ ಜಾರಿ ಜಾರಿ ಹೊರಬಂದ
ತಾಳೆ ಹೂವ ಎದೆಯಿಂದ ಜಾರಿ ಜಾರಿ ಹೊರಬಂದ
ನಾಗಿಣಿ ನಾನಾದಾಗ ನಿನ್ನರಸಿ ಬಂದಾಗ
ಕಡ್ಡೋಡುವೆಯೋ ಮುದ್ದಾಡುವೆಯೋ

ತಾಳೆ ಹೂವ ಪೊಡೆಯಿಂದ ಜಾರಿ ಜಾರಿ ಹೊರಬಂದ
ತಾಳೆ ಹೂವ ಪೊಡೆಯಿಂದ ಜಾರಿ ಜಾರಿ ಹೊರಬಂದ
ನಾಗಿಣಿ ನೀನಾದಗ ನನ್ನರಸಿ ಬಂದಗ
ಜೊತೆಯಾಗುತ್ತೇನೆ ಮುದ್ದಾಡುವೆನು

ತಾಳೆ ಹೂವ ಎದೆಯಿಂದ ಜಾರಿ ಜಾರಿ ಹೊರಬಂದ

ಮಸುಕು ಮಸುಕು ಸಂಜೆಯಲಿ ಮಲ್ಲೆ ಮೊಗ್ಗ ದೀಪದಲ್ಲಿ
ಚಿಕ್ಕ ಪುಟ್ಟ ಪೊದೆಯಲ್ಲಿ ಹಸಿರು ಹುಲ್ಲ ಮೆತ್ತೇಯಲಿ
ವಿರಹದಲಿ ದಾಹದಲಿ ಮೋಹದಲಿ ಆದಿ ಬಂದೆ ನಿನ್ನ ನೋಡಿ
ಈ ಎದೆಯ ನೆರಳಲಿ ಹಾಯಾಗಿ ಮಲಗಲು
ನಾ ಅಧಾರ ಸುಧೆಯನು ಹಿತವಾಗಿ ಹೀರಾಳು
ಇನ್ನು ಬೇಕೆ ಇನ್ನು ಬೇಕೆ ಎನ್ನುವೆ ನೀನಾಗ ಸನಿಹಕೆ ಬಂದಾಗ

ತಾಳೆ ಹೂವ ಎದೆಯಿಂದ ಜಾರಿ ಜಾರಿ ಹೊರಬಂದ
ತಾಳೆ ಹೂವ ಪೊಡೆಯಿಂದ ಜಾರಿ ಜಾರಿ ಹೊರಬಂದ

ಪೂರ್ಣ ಚಂದ್ರ ಬಂದಗ ಹಾಲಿನಂತ ಬೆಳಕಡಗ
ಬೀಸಿ ಬೀಸಿ ತಂಗಾಳಿ ಸುಯ್ಯನ್ ಎದ್ದು ಸದ್ದಡಗ
ಯೌವ್ವನದ ಆಸೆಯಲಿ ಜೊತೆಯಾಗಿ ಹಾಡುವೆ ಜೊತೆ ಸೇರಿ ಆಡುವೆ
ಈ ಸುಖದ ಆಸೆಗೀ ಈ ಮಧುರ ಭಾಷೆಗೆ
ಆನಂದವಾಗಿದೆ ಮತ್ತೇರಿ ಹೋಗಿದೆ
ಇನ್ನು ಹೀಗೇ ಇರುವ ಆಸೆ ಹೊಮ್ಮಿದೆ ಎದೆಯಲ್ಲಿ ಸೇರು ನನ್ನಲ್ಲಿ

ತಾಳೆ ಹೂವ ಪೊಡೆಯಿಂದ ಜಾರಿ ಜಾರಿ ಹೊರಬಂದ
ನಾಗಿಣಿ ನಾನಾದಾಗ ನಿನ್ನರಸಿ ಬಂದಾಗ
ಜೊತೆಯಾಗುತ್ತೇನೆ ಮುದ್ದಾಡುವೆನು
ತಾಳೆ ಹೂವ ಎದೆಯಿಂದ ಜಾರಿ ಜಾರಿ ಹೊರಬಂದ