ಸುಯ್ ಅನ್ನೋ ಗಾಳಿ - The Indic Lyrics Database

ಸುಯ್ ಅನ್ನೋ ಗಾಳಿ

गीतकार - Chi. Udaya Shankar | गायक - P. B. Sreenivas, S. Janaki | संगीत - G. K. Raghu | फ़िल्म - Bangaarada Panjara | वर्ष - 1974

Song link

View in Roman

ಸೂಯ್..
ಸುಯ್ ಅನ್ನೋ ಗಾಳಿ ಸದ್ದು ವಾಲಗಡಂಗೈತೆ
ಗುಯಿಂಗ್..
ಗುಂಗುಟ್ಟೊ ದುಂಬಿ ನಾದ ಮಂತ್ರದಂಗೈತೆ

ಸುಯ್ ಅನ್ನೋ ಗಾಳಿ ಸದ್ದು ವಾಲಗಡಂಗೈತೆ
ಗುಂಗುಟ್ಟೊ ದುಂಬಿ ನಾದ ಮಂತ್ರದಂಗೈತೆ
ಧುಮ್ಕೋ ನೀರು ಧಾರೆ ಎರೆಯೋ ಹಾಲಿನಂಗೈತೆ
ನಿನ್ನ ಕಂಡು ಎಂದು ಬರದ ನಾಚಿಕೆ ಬಂದೈತೆ
ಅದೇನೋ ಹೊಸ ಆಸೆ ನನ್ನೆದೆಯ ತುಂಬೈತೆ
ಅದೇನೋ ಹೊಸ ಆಸೆ ನನ್ನೆದೆಯ ತುಂಬೈತೆ

ಸುಯ್ ಅನ್ನೋ ಗಾಳಿ ಸದ್ದು ವಾಲಗಡಂಗೈತೆ
ಗುಂಗುಟ್ಟೊ ದುಂಬಿಯ ನಾದ ಮಂತ್ರದಂಗೈತೆ

ಯಾಕೆ ಯಾಕೆ ಯಾಕೆ ಯಾಕೆ ಹೇಳ್ತಿಯಾ ಮಲ್ಲಿ
ಕಿವಿಯಾಗ್ ಹೇಳ್ತಿಯಾ ಮಲ್ಲಿ
ಹೇಳ್’ಲೇ ಬೇಕು ಅಂದ್ರೆ ಇನ್ನು ಹತ್ತಿರಾ ಬಾ ಇಲ್ಲಿ
ಓಸಿ ಹತ್ತಿರ ಬಾ ಇಲ್ಲಿ

ಈಯ್ಯಾ..
ಪೀ ಪೀ ಪೀ ಪಿಪಿಪಿಪಿ ಊಧು ಊಧು ಪೀಪಿ
ದಂ ಡುಂ ಡುಂ ದುಂ ದುಂ ಡುಂ ಬಡಿ ಬಡಿ ಡೊಲು

ಪೀ ಪೀ ಪೀ ಪಿಪಿಪಿಪಿ ಊಧು ಊಧು ಪೀಪಿ
ದಂ ಡುಂ ಡುಂ ದುಂ ದುಂ ಡುಂ ಬಡಿ ಬಡಿ ಡೊಲು
ಹೊನ್ನಮ್ಮ ಚಿನ್ನಮ್ಮ
ಹೊನ್ನಮ್ಮ ಚಿನ್ನಮ್ಮ ಯಲ್ಲಮ್ಮ ಮಲ್ಲಮ್ಮ ನಾಚಿಕೆ ಏಕಮ್ಮ
ನಿನ್ನೇತಾಂಕ ಇಲ್ಲಾ ಕೊಂಕು ಬಿಂಕ ವಯ್ಯಾರ ಏನಮ್ಮಾ
ಬೀಸೋ ಗಾಳಿಗೆ ಬಳುಕೋ ಚೆಲುವಿಗೆ
ಬೀಸೋ ಗಾಳಿಗೆ ಬಳುಕೋ ಚೆಲುವಿಗೆ
ಸೋತು ಸೋತು ಬಡವಾದೆ

ಚೆಂದದ ಕೆಂಪು ಮೀಸೆ ಉರಿಮಾಡೋ ನಾನಾ ಜಾಣ
ದಾರಿ ಮ್ಯಾಗೆ ಚಪ್ಪರ ಕಂಡೆ
ಚಪ್ಪರದಲ್ಲಿ ಜೋಡಿಯ ಕಂಡೆ
ಜೋಡಿ ಕೈಗಾಲ ಹಿಡಿದಿದ್ ಕಂಡೆ
ಓಡೋಡಿ ಬಂದಾಗ ನಿನ್ನನೆ ಕಂಡೆ
ನಿನ್ನಲ್ಲೇ ಪ್ರಾಣ ಇತ್ತೆ
ನನ್ನ ನಿಂಗೆ ಕೊಟ್ಟೆ
ಅಡಕೆ

ಸುಯ್ ಅನ್ನೋ ಗಾಳಿ ಸದ್ದು ವಾಲಗಡಂಗೈತೆ
ಗುಂಗುಟ್ಟೊ ದುಂಬಿ ನಾದ ಮಂತ್ರದಂಗೈತೆ
ಸೂಯ್..

ಈಯ್ಯಾ..
ದೀದಿದಿ ದೀಡಿದಿಡಿ ಹೊಡಿ ಹೊಡಿ ದಿಕ್ಕಿ
ಜಿಮ್ಜಿಮ್ಜಿಮ್ ಜಿಮ್ಜಿಮ್ಜಿಮ್ಜಿಮ್ ತಲೆಯೆಲ್ಲ ಜಿಮ್ಜಿಮ್

ಹೊನ್ನಪ್ಪ ಚೆನ್ನಪ್ಪ
ಹೊನ್ನಪ್ಪ ಚೆನ್ನಪ್ಪ ಯಲ್ಲಪ್ಪ ಬೀರಪ್ಪ
ತುಂಟಾಟ ಏನಪ್ಪಾ
ನಿನ್ನೇ ತನ್ಕ ಇಲ್ಲಾ ಧೈರ್ಯ ರೋಷ ಎಲ್ಲಿಂದ ಬಂತಪ್ಪಾ
ಹಾರೋ ಸೇರಗಿಗೆ ಹೆದರೋ ಗಂದಿಗೆ
ಹಾರೋ ಸೇರಗಿಗೆ ಹೆದರೋ ಗಂದಿಗೆ
ಇಂಥಾ ಜೋರು ಏನಪ್ಪಾ

ಕಾಮನ ಬಿಲ್ಲಂಗೆ..ಇ..
ಹುಟ್ಟಿರೋ ನಾನಾ ಜಾಣೆ
ಅಪ್ಪಯ್ಯ ನೋಪ್ಪಿದ ಮೇಲೆನೆನು
ಅಪ್ಪನ ಅಕ್ಕರೆ ಸೊಸೆಯಲ್ವೇನು
ನನ್ನ ಕೈ ಹಿಡಿಯೋ ಗಯ್ಯಾಳಿ ಹೆಣ್ಣು
ಹತ್ತೀರ ಇರುವಾಗ ಚಿಂತೆ ಇನ್ನೇನು
ಎಂದು ನಿನ್ನ ಬಿಡೇನು
ಇನ್ನು ಬಾಳೆಲ್ಲ ಹಾಳ್ಜೇನು
ಅಡಕೆ

ಸುಯ್ ಅನ್ನೋ ಗಾಳಿ ಸದ್ದು ವಾಲಗಡಂಗೈತೆ
ಗುಂಗುಟ್ಟೊ ದುಂಬಿ ನಾದ ಮಂತ್ರದಂಗೈತೆ
ಧುಮ್ಕೋ ನೀರು ಧಾರೆ ಎರೆಯೋ ಹಾಲಿನಂಗೈತೆ
ನಿನ್ನ ಕಂಡು ಎಂದು ಬರದ ಆಸೆ ಬಂದೈತೆ
ಅದೇನೋ ಹೊಸ ಚೆಂದ ನಿನ್ನ ತುಂಬೈತೆ
ಅದೇನೋ ಹೊಸ ಚೆಂದ ನಿನ್ನ ತುಂಬೈತೆ

ಸೂಯ್..