ಎಷ್ಟೊಂದ್ ಜನ ಇಲ್ಲಿ - The Indic Lyrics Database

ಎಷ್ಟೊಂದ್ ಜನ ಇಲ್ಲಿ

गीतकार - H. S. Venkateshamurthy | गायक - Baby Rekha and others | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು
ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ |ಎಷ್ಟೊಂದ್|

ಮೂಟೆ ಹೊತ್ತೋರು ಹೊತ್ತು ಮಂದಿ ಸುತ್ತೋರು
ಇಟ್ಟಿಗೆ ಎತ್ತೋರು ಎತ್ತಿ ಮಹದಿ ಹತ್ತೋರು|2|
ಚಿಂದಿ ಆಯೋರು ಸಂದಿ ಗೊಂಡಿ ಹಾಯೋರೋ |2|
ಕಣ್ಣು ಮೂಗು ಕಾಣದ ಹಾಗೆ
ಮಣ್ಣು ಮೆತ್ತಿದ ಅಣ್ಣ ತಮ್ಮ|ಎಷ್ಟೊಂದ್|

ಶಾಲೆಗ್ ಹೋಗೋರು ಹಕ್ಕಿ ಹಾಗೆ ಹಾರೋರು
ಕನ್ನಡಿ ಕಣ್ಣೋರು ಕಂಡದ್ದೆಲ್ಲಾ ತಿನ್ನೋರು |2|
ಖಾಲಿ ಕಾಲೋರು ಗಾಳಿ ಮೇಲೆ ತೇಲೋರು|2|
ಕಣ್ಣು ಮೂಗು ಕಾನದ ಕಪ್ಪು
ಗಾಜಿನ ಮರೆಯ ಅಣ್ಣ ತಮ್ಮ|ಎಷ್ಟೊಂದ್|

ರೋಡಲ್ಲಿ ಓದು ಮೇಲೇ ಎಲ್ಲೋ ನೋಡೋರು
ಒಂತೆ ನಡೆಯೋರು ಬಿಚ್ಚಿದ ಹೂವಿನ ಕೊಡೆಯೋರು |೨|
ಹರವಿದ ಮುದಿಯೊರು ಅರಿಯದ ಬಾಶೆ ನುಡಿಯೊರು |೨|
ಕಣ್ಣು ಮೂಗು ಕಾಣದ ಹಾಗೆ
ಬಣ್ಣ ಮೆತ್ತಿದ ಅಕ್ಕ ತಂಗಿ|ಎಷ್ಟೊಂದ್|

ಒಣಕಲು ಮೈಯ್ಯೋರು ಹಚ್ಚಿದ ಸಣಕಲು ಕೈಯ್ಯೋರು
ಕೆದರಿದ ಜಡೆಯೋರು ಎಂಜಲ್ ಮಡಿಲಾಲ್ ನಡೆಯೋರು|2|
ಮಾಸಿದ ಕಣ್ಣೋರು ಶಿವನೇ ಸಾಕು ಎನ್ನೋರು |2|
ಕಣ್ಣು ಮೂಗು ಕಾಣದ ಹಾಗೆ
ಬಣ್ಣ ಮೆತ್ತಿದ ಅಕ್ಕ ತಂಗಿ

ಎಷ್ಟೊಂದ್ ಜನ ಇಲ್ಲಿ ಯಾರು ನನ್ನೋರು
ಎಷ್ಟೊಂದ್ ಮನೆ ಇಲ್ಲಿ ಎಲ್ಲಿ ನಮ್ಮನೆ
ಎಲ್ಲಿ ಎಲ್ಲಿ ಎಲ್ಲಿ ನಮ್ಮನೆ |ಎಷ್ಟೊಂದ್|