ಮಾರೀಶಾ ಮಾರೀಶಾ - The Indic Lyrics Database

ಮಾರೀಶಾ ಮಾರೀಶಾ

गीतकार - H. S. Venkateshamurthy | गायक - Narasimha Nayak, Manjula Gururaj | संगीत - C. Ashwath | फ़िल्म - Chinnari Muththa | वर्ष - 1993

Song link

View in Roman

ಮಾರೀಶಾ ಮಾರೀಶಾ ವೃಕ್ಷಾ ಕನ್ಯೇ ಮಾರೀಶಾ
ವೃಕ್ಷಾ ಕನ್ಯೇ ಮಾರೀಶಾ ಮಾರೀಶ ಮಾರಿಶಾ
ಎಂಥಾ ಚೆಲುವೆ ಮಾರೀಶ ಎಂಥಾಆ ಚೆಲುವೆ ಮಾರೀಶ

ಬಲ್ಲಿಯ ಮೈಯ್ಯ ಚಿಗುರಿನ ಕೈಯ್ಯ ಅರಳು ಮೊಗದ ಕನ್ಯೆಗೆ |2|
ಸೋತು ಮುತ್ತು ಕೊಡುತಲಿತ್ತು
ಸಂಜೆ ಬಿಸಿಲು ಕೆನ್ನೆಗೆ ಮಾರೀಶ ಮಾರಿಶ
ವೃಕ್ಷ ಕನ್ಯೇ ಮಾರೀಶಾ ವೃಕ್ಷ ಕನ್ಯೇ ಮಾರೀಶ

ಕಾಡ ಕಡಿಯಾಳೆಂದು ಬರಲು ನಾದ ರಾಜಕುವರನು
ತಡೆದಾಗ ವೃಕ್ಷ ಕನ್ಯೆಯೀ ಕೈಯ್ಯ ಕೊಡಲಿ ಜನರನು
ಕಾಡಿನ ಕೈ ಹಿಡಿಯಿತಾಗ ನಾಡು ಹೀಗೇ ಒಲಿದು
ಹಾಲ ಧಾರೆ ಎರೆಯುತಿತ್ತು ಹಾಲ ಧಾರೆ ಎರೆಯುತಿತ್ತು
ಬೆಳ್ದಿಂಗಳು ಸುರಿದು

ಹಸಿರ ರಥವ ಈರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೋಡು ಹೊರಳಿನಲ್ಲಿ ಮಿಂಚಿನಲಗ ಮಾಸೆಯುವ
ಹಸಿರ ರಥವ ಈರಿ ಬರುವ ಮೊಗ್ಗಿನಂಬ ಎಸೆಯುವ
ಕಣ್ಣಿನ್ನೋಡು ಹೊರಳಿನಲ್ಲಿ ಮಿಂಚಿನಲಗ ಮಾಸೆಯುವ
ಬಾಗಿವ ಕೊಕ್ಕ ತೆರೆದ ಪಕ್ಕ ಸಾಲು ಸಾಲು ಹಕ್ಕಿ|2|
ಬರುತಲಿಹವು ಮಾರಿಷೆಯ ನಗುವಿನಂತೆ ಉಕ್ಕಿ|2|

ಸೋತ ಒಂದೆ ನಿಮಿಷದಲ್ಲಿ ಬಂದ ಹಿಡಿದು ಮ್ಯಾಲೆ
ಸ್ವಸ್ತಿ ಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ
ಸೋತ ಒಂದೆ ನಿಮಿಷದಲ್ಲಿ ಬಂದ ಹಿಡಿದು ಮ್ಯಾಲೆ
ಸ್ವಸ್ತಿ ಯಂದು ನಗುತಲಿದ್ದ ಚಂದ್ರ ತಲೆಯ ಮೇಲೆ