ಹೀಗೆಲ್ಲಾ ನೀ ಕಾಡಬೇಡ - The Indic Lyrics Database

ಹೀಗೆಲ್ಲಾ ನೀ ಕಾಡಬೇಡ

गीतकार - Jayanth kaikini | गायक - Haricharan, Anitha | संगीत - Manikanth Kadri | फ़िल्म - Pruthvi | वर्ष - 2010

Song link

View in Roman

ಹೀಗೆಲ್ಲಾ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ...
ಏನೆನು ನೀ ಹೇಳಬೇಡ
ಇನ್ನೇನು ನೀ ಕೇಳಬೇಡ
ಈ ಸ್ವಪ್ನ ಪಾಲಗುವಾಗ ಮೆಲ್ಲಗೆ..
ಹಾಡಲ್ಲಿ ಸಾಲಂತೆ ನೀನು
ಇರುವಾಗ ನನ್ನೊಂದಿಗೇ..
ನಾನಿನ್ನು ಹಾಡೋದು ಯಾರಿಗೆ..
ಕಣ್ಣಲ್ಲಿ ನೀರಂತೆ ನೀನು
ಇರುವಾಗ ನನ್ನೊಂದಿಗೇ..
ನಾ ನಿಂತು ನೋಡು ಯಾರಿಗೆ..


ಬೇರೇನೆ ಭಾವ ಅಂದ ಮಾತಿಗೆ..

ನೂರಾರು ರಾಗ ಮುಖ ಪ್ರೀತಿಗೆ..
ಇನ್ನೇಕೆ.. ದೂರು...ಮಾತಾಡು ಚೂರು..
ಎಲೆಯಲ್ಲಿ ಹೂವಂತೆ ನೀನು
ಇರುವಾಗ ನನ್ನೊಂದಿಗೇ..
ಮುಂಜಾವು ಕಾಯೋದು ಯಾರಿಗೆ..
ಒಲೆಯಲ್ಲಿ ಕಾವಂತೆ ನೀನು
ಇರುವಾಗ ನನ್ನೊಂದಿಗೇ..
ಈ ಜೀವ ಬೇಡೋದು ಯಾರಿಗೆ..


ಈ ದಾರಿಯಲ್ಲಿ ನೆನಪೇ ಸೇತುವೆ..

ಏಕಾಂಗಿಯಾಗಿ ಹೇಗೇ ದಾಟುವೆ..
ದೂರಾಗೋ ಮುನ್ನಾ.. ನೀ ನೋಡು ನನ್ನಾ..
ಮನಸಲ್ಲಿ ಮಲೆಯಂತೆ ನೀನು
ಇರುವಾಗ ನನ್ನೊಂದಿಗೇ..
ಚಂದ್ರಮ ಕಾಣೋದು ಯಾರಿಗೆ..
ನೀರಲ್ಲಿ ಅಲೆಯಂತೆ ನೀನು
ಇರುವಾಗ ನನ್ನೊಂದಿಗೇ..
ತಂಗಾಳಿ ಬೀಸೋದು ಯಾರಿಗೆ..

ಹಾಗೆಲ್ಲ ನೀ ನೋಡಬೇಡ
ಹೀಗೆಲ್ಲಾ ನೀ ಕಾಡಬೇಡ
ಈ ಮೌನ ಮಾತಾಡುವಾಗ ಮೆಲ್ಲಗೆ...