ಕೊಡಗಿನ ವೀರನ - The Indic Lyrics Database

ಕೊಡಗಿನ ವೀರನ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Muthina Haara | वर्ष - 1990

Song link

View in Roman

ಕೊಡಗಿನ ವೀರನ ಗಂಡೆದೆ ಶೂರನ್
ತಾಳೆ ಗುರಿಕಾರನ್ ಪುಲಿ ಕೊಂಡ ಧೀರನ್
-

ಹುಲಿಯ ಹಾಲಿನ ಮೇವು ಎರೆದೇನು ನಿನಗೆ..
ಸವಿದು ಬೆಳೆಯೋ ಕೊಡವನೇ..
ಆನೆ ದಂತವ ನಾನು ಕೊಡೆವೆನು ನಿನಗೆ..
ಆದಿ ಬೆಳೆಯೋ ಕೊಡವನೇ..
ಕಾವೇರಮ್ಮನ ಮಡಿಲ ಕಂಡ ಲಾಲಿ ಲಾಲಿ ಜೋ
ಕಾವೇರಮ್ಮೆರ ಕುಂಜೆ ನೀನು ಲಾಲಿ ಲಾಲಿ ಜೋ

ತಾಯಿನಾಡಿಗಾಗಿ ಹಿಡಿಯೋ ಕೈಲಿ ಖಡ್ಗ ಖಡ್ಗ
ಕೊಡವ ಹೇ ಕೊಡವ ಹಿಡಿ ಖಡ್ಗ
ಯೇಡೆ ಸೀಲೋ ಜೋಡಿ ಕೋವಿಯಲ್ಲಿ ಗುಂಡು ಸಿಡಿ ಗುಂಡು
ಕೊಡವ ಹೇ ಕೊಡವ ನೀ ಗಂಡು
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು

ಆಆ.. ಓಓ..

ನವನೆ ಬೀಸಲು ನಿನಗೆ ಹೆಬ್ಬವ ಕೊಡುವೆ ಆ..
ದೇಶ ಕಾಯೋ ಕೊಡವನೇ. ಆಆ...
ಕಾವೇರಮ್ಮನು ನಿನಗೆ ವಿಜಯ ಮಾಲೆ ತರಳಯ್ಯ
ಕಾವೇರಮ್ಮೆ ನೀಕ್ ವಿಜಯ ಮಾಲೆ ಠಕ್ಕುಳ..

ಕೊಡಗಲ್ಲಿ ಜನಿಸಿ ಬಂದ ಬಂದ ಚಂದ್ರ ಈ ಚಂದ್ರ
ಹುತ್ತರಿಯ ಹುತ್ತರಿಯ ಚಂದ್ರ
ಇರುಳಲ್ಲಿ ಬೆಳಕ ತಂದ ಚಂದ್ರ ಈ ಚಂದ್ರ
ಹುತ್ತರಿಯ ಹುತ್ತರಿಯ ಚಂದ್ರ
ನಮ್ಮನೆ ದೀಪ ದೇವರ ರೂಪ
ಕೈಯ್ಯಲಿ ಕೋವಿ ವೀರನ ತೀವಿ
ವರವಾಗಿ ತಂದ ನಮಗೇ ಈ ಪುಟ್ಟಪ್ಪನು
ವರಾಯ್ತು ತಾತ್ನಾಥು

ಕೊಡಗಿನ ವೀರನ ಗಂಡೆದೆ ಶೂರನ್
ತಾಳೆ ಗುರಿಕಾರನ್ ಪುಲಿ ಕೊಂಡ ಧೀರನ್
-

ಅವ್ವ ಅವ್ವ ನಾದ ಮುತ್ತುನಾಥ ಅವ್ವ
ಪಪ್ಪ ನಾದ ಪಪ್ಪ ಪಪ್ಪ ಎಲ್ಲಿಗ ಪೋಯಿತ್ತಾ
ಮೋನೆ ಮೋನೆ ನಾಡ ಮುತ್ತುನಂತ ಮೋನೆ
ಪಪ್ಪ ನೀಡ ಪಪ್ಪ ದೇಶ ಕೈಪಾಕು ಪೋಯಿತ್ತ
ಕೊಡವರ ಹೆಣ್ಣು ಹೆತ್ತರೆ ಸ್ವರ್ಗ
ಯುದ್ಧದಿ ಗಂಡು ಸತ್ತರೆ ಸ್ವರ್ಗ
ಕಾವೇರಿ ತಾಯಿ ಕೊಟ್ಟ ನಾಡು ನಮ್ಮದು
ಈ ಮಣ್ಣಿನಲ್ಲಿ ನೂರು ಜನ್ಮ ನಮ್ಮದು