ತುತ್ತು ಅನ್ನ ತಿನ್ನೋಕೆ - The Indic Lyrics Database

ತುತ್ತು ಅನ್ನ ತಿನ್ನೋಕೆ

गीतकार - Uday shankar | गायक - Vishnuvardhan | संगीत - Vijaya Bhaskar | फ़िल्म - Jimmy Gallu | वर्ष - 1982

Song link

View in Roman

ತುತ್ತು ಅನ್ನ ತಿನ್ನೋಕೆ ಬೋಗಸೆ ನೀರು ಕುಡಿಯೊಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ ಬೋಗಸೆ ನೀರು ಕುಡಿಯೊಕೆ

ಕಾಡ್ನಾಗೊಂದು ಮರವೇ ಒಣಗಿ ಹೋದ್ರೆ ಏನಾಯ್ತು
ಊರಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಹಳ್ಳಿ ನನ್ನ ಹೋಗು ಅಂದರೇನು
ಸ್ವರ್ಗದಂತ ಊರು ನನ್ನ ಹತ್ತಿರ ಕರೆದಾಯ್ತು
ತುತ್ತು ಅನ್ನ ತಿನ್ನೋಕೆ ಬೋಗಸೆ ನೀರು ಕುಡಿಯೊಕೆ

ದುಡಿಯೋದಕ್ಕೆ ಮೈಯ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದು ತಪ್ಪು ಅಂತ ಗೊತೈತೆ
ಕಷ್ಟವೊಂದೆ ಬರದು ಸುಖವುಬರದೆ ಇರದು
ರಾತ್ರಿ ಮಲಗಿದ ಮೇಲೆ ಮತ್ತೆ ಹಗಲು ಬಂದೆ ಬತ್ತೈತೆ
ತುತ್ತು ಅನ್ನ ತಿನ್ನೋಕೆ ಬೋಗಸೆ ನೀರು ಕುಡಿಯೊಕೆ

ಹರಿಯೋ ನದಿಯು ಒಂದೆ ಕಡೆ ನಿಲ್ಲೋಕಾಗಲ್ಲ
ಹುಟ್ತೆದ ಮನುಷ್ಯ ಒಂದೆ ಊರಲಿ ಬಾಳೊಕಾಗಲ್ಲ
ದೇವ್ರು ತಾನೆ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋಗಂಟ ನಂಬಿದವರ ಕೈ ಬಿಡಾಕಿಲ್ಲ
ತುತ್ತು ಅನ್ನ ತಿನ್ನೋಕೆ ಬೋಗಸೆ ನೀರು ಕುಡಿಯೊಕೆ