ಒಳಿತು ಮಾಡು ಮನುಸ - The Indic Lyrics Database

ಒಳಿತು ಮಾಡು ಮನುಸ

गीतकार - Rushi | गायक - C. Ashwath | संगीत - Sri Madhura | फ़िल्म - Marubhoomi | वर्ष - 2018

Song link

View in Roman

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಹೆಣ ಅನ್ನುತ್ತಾರ
ಮಣ್ಣಾಗ ಊಳುತಾರ
ಚಟ್ಟ ಕಟ್ಟುತಾರ
ನಿನ್ನ ಸುತ್ತು ಹಾಕುತಾರಾ

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ


ಮೂರು ದಿನದ ಸಂತೆ
ನಗುನಗುತ ಮಾಡಬೇಕು
ದ್ವೇಷವೆಂಬ ಕಂಠೆ
ನೀ ಸುತ್ತು ಹಾಕಬೇಕು
ಮೂರು ದಿನದ ಸಂತೆ
ನಗುನಗುತ ಮಾಡಬೇಕು
ದ್ವೇಷವೆಂಬ ಕಂಠೆ
ನೀ ಸುತ್ತುಹಾಕಬೇಕು
ಪ್ರೀತಿ ಪ್ರೇಮಾ ಹಂಚಿ
ನೀ ಹೋಗಬೇಕು ಅಲ್ಲಿ
ಸತ್ತ ಮೇಲು ನಿನಗೆ
ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮಾ ಹಂಚಿ
ನೀನು ಹೋಗಬೇಕು ಅಲ್ಲಿ
ಸತ್ತ ಮೇಲು ನಿನಗೆ
ಹೆಸರು ಉಂಟು ಇಲ್ಲಿ
ಬೂಮಿಯಲ್ಲಿರೋದು ಬಡಿಗೆ ಮನೆಯಾಗೆ
ಮ್ಯಾಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಎನು ತಂದೆ
ಬರದು ಎನು ಹಿಂದೆ

ಆ.. ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ

ಸ್ವರ್ಗ ನರಕವೆಲ್ಲ ಮೆಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆ ತನಕ
ನಾನು ನಾನು ಎಂದು ಮೆರೆಯಬೇಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ
ನಾನು ನಾನು ಎಂದು ಮೆರೆಯಬೇಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬ್ಯಾಡ
ದ್ವೇಷವೆಂಬ ವಿಷವ ಕುಡಿಯಬ್ಯಾದ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡಾ
ಅದೇ ಸ್ವರ್ಗ ಕೇಳಾ
ಮನುಜನಾಗಿ ಬಾಳ

ಹೇ.. ಒಳಿತು ಮಾಡು ಮನುಸಾ
ನೀ ಇರೋದು ಮೂರು ದಿವಸ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮ್ಯಾಗೆ
ನಿನ್ನ ಹೆಸರು ಹೇಳುತಾರ
ಹೆಣ ಅನ್ನುತ್ತಾರ
ಮಣ್ಣಾಗ ಊಳುತಾರ
ಚಟ್ಟ ಕಟ್ಟುತಾರ
ನಿನ್ನ ಸುತ್ತು ಹಾಕುತಾರಾ

ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ
ನೀ ಇರೋದು ಮೂರು ದಿವಸ
ಹೇ.. ಹೇ.. ಹೇ.. ಹೇ..