ಬಾರೆ ಬಿಂಕಮ್ಮಾ - The Indic Lyrics Database

ಬಾರೆ ಬಿಂಕಮ್ಮಾ

गीतकार - Hamsalekha | गायक - Ramesh, Manjula Gururaj | संगीत - Hamsalekha | फ़िल्म - Rani Maharani | वर्ष - 1990

Song link

View in Roman

ಬಾರೆ ಬಿಂಕಮ್ಮಾಆಆ ಮುದ್ದಾಡೆ ಯಂಕಮ್ಮ
ಬಾರೋ ಯಂಕಯ್ಯ ಮುದ್ದದೋ ಮಂಕಯ್ಯ
ಮಳೆಗಿಲ್ಲ ಬಿಂಕ ಪ್ರೀತಿಗಿಲ್ಲ ಸುಂಕ
ಸೊಂಟ ನಿಂದು ಡೊಂಕ ನಿಲ್ಸೋ ನಿನ್ನ ಕೊಂಕ
ಹಾಡೋ ಸುಮ್ನೆ ಯಂಕ ಮ್ಯಾಲೆ ನಿಲ್ಲೋ ತನ್ಕಾ

ಬಣ್ಣ ಹಚ್ಚಿದ ಬಾಯಿ ಕೋಲು ವೇದ ಶರಾಯಿ
ಅರ್ದ ಕುಪ್ಸಾದ್ ಮಾತ ಆಹಾ ಚಪ್ಲಿ ಕೆಳಗೊಂಡ್ ಗೂತಾ
ಈ ಪ್ಯಾಟೆ ಶೋಕಿಲಿ
ಮಿಂಚ್ತಿಯಾ ಮಿಂಚ್ತಿಯಾ ಮಿಂಚಿ ಮಿನುಗ್ತಿಯಲ್ಲೆ

ಕೆನ್ನೆ ಮೇಲೆ ಕೂಡ್ಲು ಆಂಜಿನೊ ತಿಪುರೆ ಬಾಗ್ಲು
ನೀನೆ ಮನ ತೂಕ ನಿನ್ ಸೊಂಟಕ್ ಒಂದ್ ಬಂದೂಕ
ಈ ಇಂಗ್ಲೀಷ್ ಶೋಕಿಲಿ
ಗುಡುಗ್ತಿಯ ಗುಡುಗ್ತಿಯ ಗುಡುಗಿ ಗುಣುಗ್ತಿಯಲ್ಲೋ

ಮೈಗೆ ಕೈಗೆ ಬಟ್ಟೆ ಭಾರ ಕಣೆ
ಪ್ರೀತಿಗೆ ಎಲ್ಲ ಹೂವಿನ ಹಾರ ಕಣೋ

ಬಾರೆ ಬಿಂಕಮ್ಮಾಆಆ ಮುದ್ದಾಡೆ ಯಂಕಮ್ಮ
ಬಾರೋ ಯಂಕಯ್ಯಾ ಮುದ್ದದೋ ಮಂಕಯ್ಯ
ಮಳೆಗಿಲ್ಲ ಬಿಂಕ ಪ್ರೀತಿಗಿಲ್ಲ ಸುಂಕ
ಸೊಂಟ ನಿಂದು ಡೊಂಕ ನಿಲ್ಸೋ ನಿನ್ನ ಕೊಂಕ
ಹಾಡೋ ಸುಮ್ನೆ ಯಂಕ ಮ್ಯಾಲೆ ನಿಲ್ಲೋ ತನ್ಕಾ

ಹಚ್ಚಿದ್ ಬಣ್ಣ ಎಲ್ಲ ಮಳೆಗೆ ಕರಗೋಯ್ತಲ್ಲ
ಒಳಗಿನ್ ಅಂದ ಎಲ್ಲ ಈಚೆಗೆ ಕಂಡ್ಬುಡ್ತಲ್ಲ
ಈ ವರುಣನ ಕರುಣೆಲಿ
ಹೆಣ್ಣಿಗೂ ಮಣ್ಣಿಗೂ ಗಂಧ ಒಂದೇ ಕಣೆ

ನುಣುಚೋ ಮೀನು ನಾನು ಮಿಂಚುಳ್ಳಿ ಹಕ್ಕಿ ನೀನು
ಹಾಯಾಗ್ ಈಜ್ತಾ ಇದ್ದೆ ನಿನ್ ಕಣ್ಣಿನ್ ಗಳಕ್ ಬಿದ್ದೆ
ನಾನ್ ಕರುಣನ್ ಕರುನೇಲಿ
ಸಾವಿರ ಜನ್ಮದ ನಂಟು ನಂದು ಕಣೋ

ಪ್ರೀತಿಯ ಗಾಳಿಯ ಕುಡಿಯೋ ಪ್ರೇಮಿಗಳು
ರೆಕ್ಕೆಯೇ ಇಲ್ಲದೇ ಹಾರೋ ಪಕ್ಷಿಗಳು

ಬಾರೆ ಬಿಂಕಮ್ಮಾಆಆ ಮುದ್ದಾಡೆ ಯಂಕಮ್ಮ
ಬಾರೋ ಯಂಕಯ್ಯಾ ಮುದ್ದದೋ ಮಂಕಯ್ಯ
ಮಳೆಗಿಲ್ಲ ಬಿಂಕ ಪ್ರೀತಿಗಿಲ್ಲ ಸುಂಕ
ಸೊಂಟ ನಿಂದು ಡೊಂಕ ನಿಲ್ಸೋ ನಿನ್ನ ಕೊಂಕ
ಹಾಡೋ ಸುಮ್ನೆ ಯಂಕ ಮ್ಯಾಲೆ ನಿಲ್ಲೋ ತನ್ಕಾ