ಅರೆರೆ ಅವಳ ನಗುವ - The Indic Lyrics Database

ಅರೆರೆ ಅವಳ ನಗುವ

गीतकार - Trilok Trivikrama | गायक - Vasuki Vaibhav | संगीत - Vasuki Vaibhav | फ़िल्म - Sarkari Hi. Pra. Shaale Kasaragodu | वर्ष - 2018

Song link

View in Roman

ಅರೆರೆ ಅವಳ ನಗುವ
ನೋಡಿ ಮರತೆ ಜಗವ
ಹಗಲುಗನಸು ಮುಗಿಸಿ
ಸಂಜೆ ಮೇಲೆ ಸಿಗುವ

ಮುಸ್ಸಂಜೆಗೆ ಹಾಡಾಗಲು
ತಂಗಾಳಿಯ ತಯಾರಿ
ಸದ್ದಿಲ್ಲದೇ ಆ ಸೂರ್ಯನು
ಬಾನಾಚೆಗೆ ಪರಾರಿ

ಅವೆಳೆದುರು ಬಂದಾಗ
ಎದೆ ಬಡಿತ ಜೋರಾಗಿ
ಕೂಗೋ ಕೋಗಿಲೆ
ಮನದ ಮಾಮರಕೆ ಮರಳಿದೆ
ಮೈಕು ತರುವುದನೆ ಮರೆತಿದೆ

ಹಾಡು ಹಗಲೇನೆ ಬಾನಲಿ ನೂರುದಾರಿಯ ತಪ್ಪಿದೆ

 

ಈ ಹರೆಯವು ಬಳಿ ಬಂದರೆ
ಬೋರೆವೆಲ್ಲಿಗೂ ಬಾಯಾರಿಕೆ
ಈ ವಯಸಿಗು ಕನಸೆಲ್ಲವ ನನಸಾಗಿಸೋ ಕೈಗಾರಿಕೆ

ಗಿಡ ಮರವಾಗೋ ವರಾ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ

ಬಿಸಿಲೇರೋ ಟೈಮಲ್ಲಿ
ಬೀಸಿರಲು ತಂಗಾಳಿ
ತೇಲೋ ಮೋಡವು
ಮೂಡು ಬಂದ ಕಡೆ ಓಡಿದೆ
ಗಾಳಿ ಮಾತನ್ನೇ ಕೇಳದೆ

ಓಡೋ ಕಾಲದ ಕಾಲಿಗೆ
ಕಾಲು ಗೆಜ್ಜೆ ಕಟ್ಟಿದೆ
ದಿನ ಶಾಲೆಗೆ ಲೇಟಾದರೂ
ತುಸು ನಾಚುತ ತಲೆ ಬಾಚಿದೆ
ಕೊಳ ಪಟ್ಟಿಗೆ ಏಟಾದರೂ
ನಸು ನಾಚುತ ಕೈ ಚಾಚಿದೆ
ಎಳೆ ಹ್ರುದಯಕ್ಕೆ ಮಳೆ ಸುರಿದಾಗ ಮೀಸೆ ಅಂಚಲ್ಲಿ ಆಸೆ ಚಿಗುರಿದೆ

ಬಂಚು ಬಂಚಾಗಿ ಕನಸು ಬಂದಿದೆ
ಓ…
ಕಿರುನಗೆಯ ಥೇರನ್ನು ಕಣ್ಣಲ್ಲೆ ಎಳೆವಾಗ
ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ
ಏನೂ ಸುಳಿವನ್ನೆ ನೀಡದೆ