ಹೆ ಶಾರದೆ… - The Indic Lyrics Database

ಹೆ ಶಾರದೆ…

गीतकार - K. Kalyan | गायक - Asha, Sunidhi | संगीत - Vasuki Vaibhav | फ़िल्म - Sarkari Hi. Pra. Shaale Kasaragodu | वर्ष - 2018

Song link

View in Roman

ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದ ಆಗ್ನೇನೆ ಎಲ್ಲಾನು

ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…

 

ನಾಳೆಗಳ… ದಾರಿಯಲಿ…
ನಂಬಿಕೆಯ ನೆಲಯಾಗಿರಿಸು…
ಮುನ್ನಡೆಸು.. ಕೈ ಹಿಡಿದು
ನಾವಾಡೊ ಪದಪದದಲ್ಲೂ ಸಂಚರಿಸು…

ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದ ಆಗ್ನೇನೆ ಎಲ್ಲಾನು

ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ಹೆ ಶಾರದೆ…

ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆ ಇಂದ ಶಿಲೆಗೆ ಕುಂಚಾರತಿ
ಪ್ರತಿಯೊಂದರಲ್ಲೂ ಅವನ ಅಣತಿ
ಒಲವಿಂದ ತಾನೆ ಸುಖ ಸಮ್ಮತಿ

 

ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ

ಹೆ ಶಾರದೆ… ದಯಪಾಲಿಸು…
ಈ ಬಾಳನು… ಬೆಳಕಾಗಿಸು…
ಹೆ ಶಾರದೆ…