ಹೇಳೇ ಕೋಗಿಲೆ - The Indic Lyrics Database

ಹೇಳೇ ಕೋಗಿಲೆ

गीतकार - K. Kalyan | गायक - K. S. Chithra | संगीत - Ilaiyaraaja | फ़िल्म - Nammoora Mandara Hoove | वर्ष - 1997

Song link

View in Roman

ಅಹಹಾಹಾ ಹಾಹಾ..
ಅಹಹಹಾ ಹಾಹಾ...
ಹಹಹ..

ಹೇಳೇ ಕೋಗಿಲೆ ಇಂಪಾಗಲ
ಹೇಳ ಮಲ್ಲಿಗೆ ಕಂಪಾಗಲ
ಎಲ್ಲೆಲ್ಲು ಹೊಸಬೆಳಕು ಕಂಡಂತಾಯಿತು

ಹೇಳೆ ಇಬ್ಬನಿ ತಂಪಾಗಲಾ
ಹೇಳ ದುಂಬಿಯೆ ಜೊಂಪಾಗಲಾ
ಎಲ್ಲೆಲ್ಲು ಹೊಸ ಚಿಗುರು ಬಂದಂತಾಯ್ತು
ಹೇ ಓ ಮೈನಾ ಈ ಮೈನಾ ಮರೆತಾಯ್ತು
ಈ ಮನದುಂಬಿ ಹುರಿದುಂಬಿದಂತಾಯಿತು
ಹೇ ಯೇಕಿಂತ ಲವಲವಿಕೆ ಮೈಗೂಡಿತು

ಹೇಳೇ ಕೋಗಿಲೆ ಇಂಪಾಗಲ
ಎಲ್ಲೆಲ್ಲು ಹೊಸಬೆಳಕು ಕಂಡಂತಾಯಿತು

ಜಿಗಿಯೊ ಭವನೆಯು ಮೈಯಲಿ
ಹಸಿರ ಉತ್ಸವ ಮಾಡಿತು

ಕನಸೋ ಕಲ್ಪನೆಯೋ ತೋಚದೆ
ತುಮುಲ ಪುಲಕಗಳ ತಂದಿತು
ಆಆಆ..
ಹೂವುಗಳ ಪರಿಮಳವೇ ಪರಿ ಪರಿ ನಾಚುವಂತೆ
ಹೃದಯವೇ ರಮಿಸುತಿದೆ ಯೇಕಿಂದು

ಹೇಳೇ ಕೋಗಿಲೆ ಇಂಪಾಗಲ
ಎಲ್ಲೆಲ್ಲು ಹೊಸಬೆಳಕು ಕಂಡಂತಾಯಿತು
ಹೇ ಓ ಮೈನಾ ಈ ಮೈನಾ ಮರೆತಾಯ್ತು
ಈ ಮನದುಂಬಿ ಹುರಿದುಂಬಿದಂತಾಯಿತು
ಹೇ ಏಕಿಂತ ಲವಲವಿಕೆ ಮೈಗೂಡಿತು
ಹೇಳ ಕೋಗಿಲೆ ಇಂಪಾಗಲ..

ಮುಗಿಲ ಮೇಲೇರಿ ಹಾರುವ
ಬಯಕೆ ಎಕಿಂದು ಮೂಡಿತು

ಕಡಲ ಒಡಲ ಈಜುವ
ಠವಕ ಯೇಕಿಲ್ಲಿ ಕಾಡಿತು ಆಹಾ...
ಹೊಸ ಆಕಾಶವಿದೋ ಹೊಸತು ಭೂಮಿ ಇದೋ
ಹೃದಯವೇ ಬ್ರಾಮಿಸುತಿದೆ ಯೇಕಿಂದು ...

ಹೇಳೇ ಕೋಗಿಲೆ ಇಂಪಾಗಲ
ಹೇಳ ಮಲ್ಲಿಗೆ ಕಂಪಾಗಲ
ಎಲ್ಲೆಲ್ಲು ಹೊಸಬೆಳಕು ಕಂಡಂತಾಯಿತು

ಹೇಳೆ ಇಬ್ಬನಿ ತಂಪಾಗಲಾ
ಹೇಳ ದುಂಬಿಯೆ ಜೊಂಪಾಗಲಾ
ಎಲ್ಲೆಲ್ಲು ಹೊಸ ಚಿಗುರು ಬಂದಂತಾಯ್ತು
ಹೇ ಓ ಮೈನಾ ಈ ಮೈನಾ ಮರೆತಾಯ್ತು
ಈ ಮನದುಂಬಿ ಹುರಿದುಂಬಿದಂತಾಯಿತು
ಹೇ ಯೇಕಿಂತ ಲವಲವಿಕೆ ಮೈಗೂಡಿತು

ಹೇಳೇ ಕೋಗಿಲೆ ಇಂಪಾಗಲ
ಎಲ್ಲೆಲ್ಲು ಹೊಸಬೆಳಕು ಕಂಡಂತಾಯಿತು