ಇವಳು ಹೆತ್ತವಳು - The Indic Lyrics Database

ಇವಳು ಹೆತ್ತವಳು

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Megha Male | वर्ष - 1994

View in Roman

ಓಂ ಪ್ರಥಮ ಓಂ ಪ್ರಥಮ ಓಂ ಪ್ರಥಮ ಓಂ
ಪ್ರೇಮ ಪ್ರಥಮ ಓಂ ಪ್ರಥಮ ಓಂ

ಇವಳು ಹೆತ್ತವಳು ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು ಅವಳು ಮುತ್ತುಗಳ ಇಟ್ಟವಳು
ತಾಯಿ ಬಲ್ಲಿ ಹೂವಾದೆ ಪ್ರೇಮಿ ಹಾಡು ಹಾಡಿದೆ
ಹೆತ್ತವಳೋ ಹೊತ್ತವಳೋ ಮುತ್ತವಳೋ ಇಲ್ಲಾ ಮುತ್ತವಳೋ

ಇವಳು ಹೆತ್ತವಳು ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು ಅವಳು ಮುತ್ತುಗಳ ಇಟ್ಟವಳು

ತಾಯಿಯಾನೆ ಹೇಳಿ ಪ್ರೀತಿ ಮಾಡಿದೆ
ಆನೆ ಈಗ ದಾರಿ ಕಾಣದೆ
ತಾಯಿ ಮಾತೆ ಇಲ್ಲಿ ವೇದವಾಗಿದೆ
ವೇದಘೋಷವೆಲ್ಲಾ ಪ್ರೇಮವಾಗಿದೆ
ದೈವ ಒಂದೆಡೆ ಜೀವ ಒಂದೆಡೆ
ಧರ್ಮ ಸಂಕಟ ಯೆತ್ತಿದೆ ಹೆಡೆ

ಇವಳು ಹೆತ್ತವಳು ಅವಳು ಕನಸುಗಳ ಹೊತ್ತವಳು
ಇವಳು ತುತ್ತವಳು ಅವಳು ಮುತ್ತುಗಳ ಇಟ್ಟವಳು

ಇವಳು ಅಮೃತ ಅವಳು ಸುಕೃತಾ
ಇವಳು ಚೇತನ ಅವಳು ಬಂಧನ
ತಾಯಿ ನುಡಿದರೆ ಲೋಕ ಸಮ್ಮತ
ಪ್ರೇಮಿ ನುಡಿದರೆ ನ್ಯಾಯ ಸಮ್ಮತ
ಲೋಕ ನಿಂದನೆ ತಾಯ ತೋರಿದರೆ
ಆತ್ಮ ವಂಚನೆ ಪ್ರಿಯಾಳ ತೊರೆದರೆ

ಇವಳು ಹೆತ್ತವಳು ನೂರು ನೋವು ಹೊತ್ತವಳು
ಅವಳು ಮುತ್ತವಳು ಕೋಟಿ ಕನಸುಗಳ ಹೊತ್ತವಳು
ತಾಯಿ ಬಲ್ಲಿ ಹೂವಾದೆ ಪ್ರೇಮಿ ಹಾಡೋ ಹಾಡು
ಕಂಪಿರದ ಇಂಪಿರದ ಹೂವಾಡೆ ಆಲುವಾ ಹಾಡದೆ

ಇವಳು ಹೆತ್ತವಳು ನೂರು ನೋವು ಹೊತ್ತವಳು
ಅವಳು ಮುತ್ತವಳು ಕೋಟಿ ಕನಸುಗಳ ಹೊತ್ತವಳು