ಒಂದೂ ಹುಡುಗೀ ನೋಡ್’ದೇ ಕಣೋ - The Indic Lyrics Database

ಒಂದೂ ಹುಡುಗೀ ನೋಡ್’ದೇ ಕಣೋ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Megha Male | वर्ष - 1994

View in Roman

ಒಂದೂ ಹುಡುಗೀ ನೋಡ್’ದೇ ಕಣೋ
ಕಣ್ಣು ಕಮಲ ನೋಟ ವಿಮಲಾ
ವಿದ್ಯುನ್ನತೆ ಇವಳು ರೋಮಾಂಚನದವಳು
ಬಾಳೆ ದಿಂಡವಳು ಬಾಳುಕಾಡದೆ ಬರಲು

ಒಂದೂ ಹುಡುಗೀ ನೋಡ್’ದೇ ಕಣೋ
ಕೊರಲು ಕೊಳಲು ಕುರುಲು ಮುಗಿಲು
ತುಳುಕೋ ಯೌವ್ವನದ ಶ್ರೀಮಂತಿಕೆಯವಳು
ಕುಡಿಯಲೇ ಬೇಕೆನಿಸೋ ಕಾದಂಬರಿ ಇವಳು

ಕೊರಳನ್ನು ಕೊಂಕು ಮಾಡಿ ಕವಿಯನ್ನು ಕೆಣಕೋ ಬೊಂಬೆ
ನಡುವನ್ನು ನವಿಲು ಮಾಡಿ ಮೈ ಗೆದರೋ ಮಂದ ಗಮನ
ಹಸಿರಲಿ ವನ ರಾಣಿ ಬಿಲುಪಾಲಿ ಸುಮಾ ರಾಣಿ
ಇವಳೆಂದರೆ ಬಣ್ಣಕೆ ಮೇರುಗು

ಒಂದೂ ಹುಡುಗೀ ನೋಡ್’ದೇ ಕಣೋ
ನಗುವು ಬೆಳ್ಳಿ ಮಾಡೋ ಮಲ್ಲಿ
ದುಂಬಿ ಹಿಂದುಗಾಲ
ದೃಷ್ಟಿ ಆಗದಿರಲಿ ಇವಳ
ಹೂವು ಹೃದಯ ನನಗೇ ಮೂಡುಪಿರಲಿ

ಆದಿ ಇಂದ ಮುದಿಯ ವರೆಗೆ
ಇವಳನ್ನೇ ಓದುತ್ತಿರುವೆ
ಪ್ರೀತಿ ಪರೀಕ್ಷೆಯಲ್ಲಿ
ಇವಳನ್ನೇ ಬರೆಯುವೆ
ಪಡೆಯುವೆ ಪದವೇ ನಾ
ಹೃದಯದ ಪದಕ
ಇವಳೆಂದರೆ ಜೀವನ ಚಿತ್ರ

ಒಂದೂ ಹುಡುಗೀ ನೋಡ್’ದೇ ಕಣೋ
ಕರೆಯೋ ತೋಳು ತೊಂಡೆ ಹೋಲು
ಮಾನಸ ಸ್ವಾಗತಿಸೋ
ದೀಪಾರತಿ ಇವಳು
ಮಾನಸ ಸ್ವೀಕಾರಿಸೋ
ರೂಪಾರತಿ ಇವಳು

ಒಂದೂ ಹುಡುಗೀ ನೋಡ್’ದೇ ಕಣೋ
ಬೆಡಗಿ ಸೊಬಗಿ ಯಡೆಯ ಹುಡುಗಿ
ಶ್ರೀಕರವ ಬಾರೆವ ನಾಯಕಿಯೋ ಇವಳು
ಪ್ರೇಮಕರವ ನುಡಿವ ಪಾಲಕಿಯೋ ಇವಳು