ಹೃದಯ ತುಂಬಿ - The Indic Lyrics Database

ಹೃದಯ ತುಂಬಿ

गीतकार - R. N. Jayagopal | गायक - Vani Jairam | संगीत - M. Ranga Rao | फ़िल्म - Hrudaya Pallavi | वर्ष - 1987

Song link

View in Roman

ಹೃದಯ ತುಂಬಿ ಹಾಡುವೆ ಹೊಸದು ಗೀತ ಮಾಲಿಕೆ
ಇದುವೆ ನನ್ನ ಪೂಜೆಯು ಕನ್ನಡಾಂಬೆ ಪಾದಕೆ
ಹೃದಯ ತುಂಬಿ ಹಾಡುವೆ ಹೊಸದು ಗೀತ ಮಾಲಿಕೆ
ಇದುವೆ ನನ್ನ ಪೂಜೆಯು ಕನ್ನಡಾಂಬೆ ಪಾದಕೆ

ಸರಿಗಮ ಪದನೀಸ ನಿಡಪಮ ಗರೀಸ

ಏಳು ಸ್ವರದ ದೀಪದೆ ತಾಯಿಗೆನ್ನ ಆರತಿ
ಭಾವದಲೆಯ ನೀರಲಿ ತೊಳೆವೆ ಅವಳ ಮೂರುತಿ
ಅವಳ ಸೀವೆ ಮಾಡುವ ಆಸೆ ನನ್ನ ಜೀವಕೆ

ಹೃದಯ ತುಂಬಿ ಹಾಡುವೆ ಹೊಸದು ಗೀತ ಮಾಲಿಕೆ
ಇದುವೆ ನನ್ನ ಪೂಜೆಯು ಕನ್ನಡಾಂಬೆ ಪಾದಕೆ

ರನ್ನ ಪಂಪ ಹಾಡಿದ ಕಾವ್ಯ ನಿನಗೆ ಕಾಣಿಕೆ
ಕಾವೇರಿ ತುಂಗೆ ತೀರ್ಥವೇ ನಿನ್ನಯ ಅಭಿಷೇಕಕೆ
ಶ್ರೀಗಂಧ ತಂದ ಚಂದನ ತಾಯೆ ನಿನಗೆ ಲೇಪನ

ಹೃದಯ ತುಂಬಿ ಹಾಡುವೆ ಹೊಸದು ಗೀತ ಮಾಲಿಕೆ
ಇದುವೆ ನನ್ನ ಪೂಜೆಯು ಕನ್ನಡಾಂಬೆ ಪಾದಕೆ