ಆಕಾಶದಿಂದ ಬಂದ - The Indic Lyrics Database

ಆಕಾಶದಿಂದ ಬಂದ

गीतकार - R. N. Jayagopal | गायक - S. P. Balasubrahmanyam, Vani Jairam | संगीत - M. Ranga Rao | फ़िल्म - Hrudaya Pallavi | वर्ष - 1987

Song link

View in Roman

ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ

ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಆ ನೀಲಿ ಬಾಣಿನ ರಂಗು ಈ ಕಣ್ಣ ಅಂದವ ಕಂಡು
ತನ್ನೊಡಲ ರಂಗನು ಇಂದು ನಿನಗಾಗಿ ತಂದಿತೋ

ಲಾ ಲಲಾಲಾ ಲಾಲಾಲಾ ಲಾ

ಆ ಹಾ ಹಾ ಹಾ
ಓಹೋ ಹೋ ಹೂ ಹೂ

ನೀ ಬರುತಿದ್ದರೇ ಈ ಈ
ನೀ ಬರುತಿದ್ದರೇ ಮಳೆಯ ಬಿಲ್ಲು ಬಳುಕೋ ಚೆಲುವು
ನೀ ಕಾಲಿಟ್ಟಿದೆ ಅರಳುತಿಹುದು ನಗುವ ಹೂವು
ಆ ಕಾಳಿದಾಸನ ಶೃಂಗಾರ ಸ್ಪೂರ್ತಿ ನೀನು
ಆ ವಿಶ್ವ ಶಿಲ್ಪಿಯ ನಿಜ ಸೃಷ್ಟಿ ಕೀರ್ತಿ ನೀನು
ಬೇಳೂರ ಶಿಲೆಯು ಜೀವ ತಾಳೆದಿಲ್ಲಿ ಬಂದಿತು

ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ

ಆ ಹಾ ಹಾ ಹಾ
ಓಹೋ ಹೋ ಹೂ ಹೂ

ಈ ಗೀತಾಂಜಲಿ
ಈ ಗೀತಾಂಜಲಿ ಚೆಲುವ ರಾಶಿ ನಿನಗೆ ಕೊಡುಗೆ
ಈ ಆರಾಧನೆ ಮನದ ಗುಡಿಯ ದೇವಿ ನಿನಗೆ
ಈ ಬಾಳ ಯಾತ್ರೆಯಲ್ಲಿ ಸಂಗಾತಿಯಾಗು ಬಾ
ಸುಖವೆಂಬ ಪಾತ್ರೆಯಲ್ಲಿ ನಗು ಜೇನು ತುಂಬು ಬಾ
ಒಲವಿಂದು ನಿನ್ನಯ ರೂಪ ಮೈ ತಾಳಿ ಬಂದಿತೋ

ಆಕಾಶದಿಂದ ಬಂದ ಆ ಬೆಳ್ಳಿ ತಾರೆ
ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ

ಲಾಲಾ ಲಾಲಾ ಲಾಲಾಲಾ ಲಾಲಾ ಲಾಲಾ