ಕಣ್ಣು ಕಣ್ಣು ಕಲೆತಾಗ - The Indic Lyrics Database

ಕಣ್ಣು ಕಣ್ಣು ಕಲೆತಾಗ

गीतकार - Chi. Udaya Shankar | गायक - Rajkumar, Vani Jayaram | संगीत - Upendra Kumar | फ़िल्म - Kaamana Billu | वर्ष - 1983

Song link

View in Roman

ಕಣ್ಣು ಕಣ್ಣು ಕಲೆತಾಗ
ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ

ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ

ಹೊಸ ಸುಖ ಕಾಣುತಿದೆ
ಹೊಸ ಕನಸಾಗುತಿದೆ
ಹೊಸಬಯಕೆಯು ಮೂಡುತಿದೆ..

ಹೊಸ ಹೊಸ ಭವನ
ಹೊಸ ಹೊಸ ಕಲ್ಪನೆ
ಹೊಸ ಲೋಕಕೆ ಸೆಳೆಯುತಿದೆ..

ಆಹಾ ಎನೋ ಹೇಳೋ ಆಸೆ
ಆಹಾ ಎನೋ ಕೇಳೋ ಆಸೆ
ನಾಚಿಕೆ ತಡೆಯುತಿದೆ..

ಆಹಾ ಎನೋ ಹೇಳೋ ಆಸೆ
ಆಹಾ ಎನೋ ಕೇಳೋ ಆಸೆ
ನಾಚಿಕೆ ತಡೆಯುತಿದೆ..

ಕಣ್ಣು ಕಣ್ಣು ಕಲೆತಾಗ
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ

ಮೈ ನವಿರೆಳುತಿದೆ
ತನು ಹೂವಾಗುತಿದೆ
ಮನ ಕವಿತೆಯ ಹಾಡುತಿದೆ..

ನಿನ್ನ ಮನ ಹಾಡಿರುವಾ
ಸವಿ ನುಡಿ ಸಾಲುಗಳು
ಈ ಕಂಗಳೇ ಹೇಳುತಿವೆ..

ಈ ಮಾತು ಎಂಥಾ ಚೆನ್ನ
ಈ ನೋಟ ಎಂಥಾ ಚೆನ್ನ
ನಿನ್ನ ಪ್ರೇಮಕೆ ನಾ ಸೋತೆ..

ಈ ಮಾತು ಎಂಥಾ ಚೆನ್ನ
ಈ ನೋಟ ಎಂಥಾ ಚೆನ್ನ
ನಿನ್ನ ಪ್ರೇಮಕೆ ನಾ ಸೋತೆ..

ಕಣ್ಣು ಕಣ್ಣು ಕಲೆತಾಗ..
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ

ಕಣ್ಣು ಕಣ್ಣು ಕಲೆತಾಗ..
ಮನವು ಉಯ್ಯಾಲೆಯಾಗಿದೆ ತೂಗಿ
ಹೃದಯ ಬಿಡಲಾರೆ ಎಂದಿದೆ ಕೂಗಿ