ಅಮ್ಮಾ - The Indic Lyrics Database

ಅಮ್ಮಾ

गीतकार - V. Nagendra Prasad | गायक - Sunil Kashyap | संगीत - Gurukiran | फ़िल्म - Amma I Love You | वर्ष - 2018

Song link

View in Roman

ಅಮ್ಮಾ.. ನನ್ನೀ ಜನುಮಾ..
ನಿನ್ನಾ.. ವರದಾನವಮ್ಮಾ..
ಅಮ್ಮಾ.. ನಿನಗ್ಯಾರು ಸಮಾ..
ನನ್ನಾ.. ಜಗ ನೀನೇ ಅಮ್ಮಾ..

ನಿನ್ನ ಆ ಲಾಲಿ ಪದ
ನನ್ನ ಒಳಗೇ ಸದಾ
ನಿಲ್ಲದೆ ಮಿಡಿದಿದೆ ಅಮ್ಮಾ..
ಗುಡಿಯ ಹಂಗಿರದ
ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮಾ..

ಅಮ್ಮಾ.. ನನ್ನೀ ಜನುಮ
ನಿನ್ನಾ.. ವರದಾನವಮ್ಮಾ..
ಅಮ್ಮಾ..

ನಿನ್ನ ಒಂದು ಕೈ ತುತ್ತು ಸಾಕು
ಈ ಜನ್ಮ ಪೂರ್ಣ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು
ಆ ನೆನಪಿನಲ್ಲಿ ಸೇವೆ ಇರುವೆನು
ನೀನೆ ನನ್ನ ಲೋಕವು
ನೀನೆ ನನ್ನ ಜೀವವು
ನೀನೆ ನನಗೇ ಎಲ್ಲವು ಅಮ್ಮಾ..

ಅಮ್ಮಾ.. ನಿಂಗ್ಯಾರು ಸಮಾ..
ನನ್ನಾ.. ಜಗ ನೀನೇ ಅಮ್ಮಾ..
ಅಮ್ಮಾ..

ನಿನ್ನ ಒಂದು ಸಾಂತ್ವನವೇ ಸಾಕು
ನೋವನೆಲ್ಲ ನಾ ನುಂಗಿ ನಗುವೆನು
ನೀನು ಒಮ್ಮೆ ಬೆನ್ನು ತಡವು ಸಾಕು
ಈ ಜಗವೇನಲ್ಲ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೇ ಇರುವರು
ಎಂಬ ನಿಜವ ಅರಿತೇನು ಅಮ್ಮಾ..

ಅಮ್ಮಾ.. ನನ್ನೀ ಜನುಮ
ನಿನ್ನಾ.. ವರದಾನವಮ್ಮಾ..
ಅಮ್ಮಾ.. ನಿಂಗ್ಯಾರು ಸಮಾ..
ನನ್ನಾ.. ಜಗ ನೀನೇ ಅಮ್ಮಾ..

ನಿನ್ನ ಆ ಲಾಲಿ ಪದ
ನನ್ನ ಒಳಗೇ ಸದಾ
ನಿಲ್ಲದೆ ಮಿಡಿದಿದೆ ಅಮ್ಮ.
ಗುಡಿಯ ಹಂಗಿರದ
ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮಾ..

ಅಮ್ಮಾ..