ಅಮ್ಮ ನಿನ್ನ - The Indic Lyrics Database

ಅಮ್ಮ ನಿನ್ನ

गीतकार - Shashank Sheshagiri | गायक - Narayan Sharma | संगीत - Judah Sandhy | फ़िल्म - Thayige Thakka Maga | वर्ष - 2018

Song link

View in Roman

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೇ ಪ್ರತಿ ಜನ್ಮಕು

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೇ ಪ್ರತಿ ಜನ್ಮಕು
ಸಾರಿ ಸಾಟಿ ಇರದ ನಿನ್ನ ಪ್ರೀತಿ
ಸವಿಯ ಬೇಕು ಯೆಂದೆಂದಿಗು
ಅಮ್ಮ ನಿನ್ನ ಮಡಿಲಲ್ಲಿ ಜಾಗ
ನೀಡು ನನಗೇ ಪ್ರತಿ ಜನ್ಮಕು
ನಿನ್ನ ಪಾತ ಶಾಲೆ ವಾತ್ಸಲ್ಯ ಮಾಲೆ
ಬೇಕು ಎಂದೆಂದಿಗು ನೀನೆ ನಾನೆಂದಿಗು

ಯೇನೆ ನೋವನ್ನ ನಾ ನುಂಗಲು
ಕೂಗೋ ಪದವೇ ನೀನಲ್ಲವೇ
ನಿನ್ನೆಲ್ಲ ನೋವಿನ ದಯದಿಂದ ತಾನೆ
ನನ್ನೆಲ್ಲ ನಗುವಿನ ಕ್ಷಣವೆಲ್ಲವು
ನಿನ್ನ ಕೈ ತುತ್ತ ಋಣ ಭಾರ ನನ್ನ ಮೇಲಿದೆ
ತೀರೋದು ಉಳಿಯೋದು ನಿನ್ನ ಕೈಲಿದೇ

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೇ ಪ್ರತಿ ಜನ್ಮಕು

ಅಮ್ಮಾ ನೀನೇ ಕೊಟ್ಟ ಜೀವಾ
ನಿನ್ನ ಕಾಯೋ ಸಲುವಾಗಿದೆ
ನಿನ್ನ ಹೆಸರ ಜೊತೆಗೇ ತಾನೆ
ನನ್ನ ಉಸಿರು ಬೆರೆತಾಗಿದೆ
ಜಗ ಪೂಜಿಸಲಿ ನೂರಾರು ಶಿಲೆಯಾದರು
ನೀನೆನೆ ಯೆಂದೆಂದು ನನ್ನ ದೇವರು

ಅಮ್ಮ ನಿನ್ನ ಮಗನೆಂಬ ಹೆಮ್ಮೆ
ಬೇಕು ನನಗೇ ಪ್ರತಿ ಜನ್ಮಕು
ಸಾರಿ ಸಾಟಿ ಇರದ ನಿನ್ನ ಪ್ರೀತಿ
ಸವಿಯ ಬೇಕು ಯೆಂದೆಂದಿಗು
ಅಮ್ಮ ನಿನ್ನ ಮಡಿಲಲ್ಲಿ ಜಾಗ
ನೀಡು ನನಗೇ ಪ್ರತಿ ಜನ್ಮಕು
ನಿನ್ನ ಪಾತ ಶಾಲೆ ವಾತ್ಸಲ್ಯ ಮಾಲೆ
ಬೇಕು ಎಂದೆಂದಿಗು ನೀನೆ ನಾನೆಂದಿಗು
ನೀನೆ ನಾನೆಂದಿಗು