ಉಘೇ ಉಘೇ - The Indic Lyrics Database

ಉಘೇ ಉಘೇ

गीतकार - Ghouse Pheer | गायक - Vijay Prakash | संगीत - Arjun Janya | फ़िल्म - Kichchu | वर्ष - 2017

Song link

View in Roman

ಉಘೇ ಉಘೇ ಹುಣ್ಣಿಮೆ ಬಂದಾಯ್ತು..
ಎಡ ಬಲ ಮೆಲ್ಲನೆ ಒಂದಾಯಿತು..
ಉಘೇ ಉಘೇ ಹುಣ್ಣಿಮೆ ಬಂದಾಯ್ತು..
ಗಂಗೆ ತುಂಗೆ ಒಟ್ಟಿಗೇ ಸೇರಾಯ್ತು..

ಎರಡು ಕಾಯಿ ಕೂಡಿ ಈಗ ಬಂತು ಚಪ್ಪಲೆ
ಮುಂದೆ ಐತೆ ಮಾರಿ ಹಬ್ಬ ಕಲಗಲೀಲೆ
ಹೂವು ಮುಳ್ಳು ಜೊತೆ ಜೊತೆ ಸೇರಿ ಈಗ ಹೊಸ ಕಥೆ

ತಾಕತ್ತು ತಾಕತ್ತು ಬೇಕು ತಾಕತ್ತು
ಗೆಲ್ಲಕ್ಕೆ ಜಗತ್ತು ಬೇಕು ತಾಕತ್ತು
ಆಪತ್ತು ಆಪತ್ತು ಸುತ್ತ ಆಪತ್ತು
ಹುತ್ತದಲ್ಲಿ ಕೈ ಇಟ್ರೆ ತುಂಬ ಆಪತ್ತು

ಉಘೇ ಉಘೇ ಹುಣ್ಣಿಮೆ ಬಂದಾಯ್ತು..ಉ..
ಎಡ ಬಲ ಮೆಲ್ಲನೆ ಒಂದಾಯ್ತು.. ಆಹಾ

ಎಲೆಯೆಲೆಲ್ ಓಹೋಯಿ ಹೋಯಿ ಎಲೆ

ಹೊರಾಡೋ ಮಿಂಚು ಕಣ್ಣಲ್ಲಿ
ಹಾರಾಡೋ ಆಸೆ ಎದೆಯಲ್ಲಿ
ಸ್ನೇಹಕ್ಕೆ.. ಪ್ರಾಣ ಕೊಡುವೆ
ನಿಯತ್ತು.. ಉಂಟು ಉಸಿರಲ್ಲಿ
ಇತ್ತ ಹೆಜ್ಜೆ ದಿಟ್ಟವಾಗಿದೆ
ಇಲ್ಲಿ ಕಿಚ್ಚಿನಳ್ಳಿ
ಇನ್ನು ಮುಂದೆ ಗುರಿಯು ಒಂದೇ
ನಮ್ಮ ಹಕ್ಕು ಸಿಕ್ಕೋ ತನ್ಕ ನಿಲ್ಲೋದಿಲ್ಲ ಆರ್ಭಟ

ತಾಕತ್ತು ತಾಕತ್ತು ಬೇಕು ತಾಕತ್ತು
ಗೆಲ್ಲಕ್ಕೆ ಜಗತ್ತು ಬೇಕು ತಾಕತ್ತು
ಆಪತ್ತು ಆಪತ್ತು ಸುತ್ತ ಆಪತ್ತು
ಹುತ್ತದಲ್ಲಿ ಕೈ ಇಟ್ರೆ ತುಂಬ ಆಪತ್ತು

ಓಹೋ.. ಮೌನಾನೇ ಮಾತು ನೋಡಿಲ್ಲಿ
ಸಣ್ಣೆಗಳೇ ಭಾಷೆ ಬಾಳಲ್ಲಿ
ಭಾವನೆಗೆ ಬಣ್ಣ ಹಚ್ಚೋಕೆ
ನೋಟಾಗಲ ಬಾಣ ಸಾಕಿಲ್ಲಿ
ಎರಡು ಹೃದಯ ಒಂದೇ ಆಗಿದೆ
ಇಲ್ಲಿ ಪ್ರೀತಿಯಲ್ಲಿ
ಮುಗ್ದ ಮನಸು ಕೋಟಿ ಕನಸು
ಹೂವು ದುಂಬಿ ಪ್ರೇಮ ನಂಬಿ ತೇಲಾಡವ್ರೆ ಬಾಳಲ್ಲಿ

ತಾಕತ್ತು ತಾಕತ್ತು ಬೇಕು ತಾಕತ್ತು
ಗೆಲ್ಲಕ್ಕೆ ಜಗತ್ತು ಬೇಕು ತಾಕತ್ತು
ಆಪತ್ತು ಆಪತ್ತು ಸುತ್ತ ಆಪತ್ತು
ಹುತ್ತದಲ್ಲಿ ಕೈ ಇಟ್ರೆ ತುಂಬ ಆಪತ್ತು

ಉಘೇ ಉಘೇ ಹುಣ್ಣಿಮೆ ಬಂದಾಯ್ತು..
ಎಡ ಬಲ ಮೆಲ್ಲನೆ ಒಂದಾಯಿತು..