ಪ್ರೀತಿಸು ಸಮೀಪಿಸು - The Indic Lyrics Database

ಪ್ರೀತಿಸು ಸಮೀಪಿಸು

गीतकार - Chi. Udayashankar | गायक - S. Janaki, P. B. Srinivas | संगीत - Rajan-Nagendra | फ़िल्म - Bayasade Banda Bhagya | वर्ष - 1977

Song link

View in Roman

ಪ್ರೀತಿಸು ಸಮೀಪಿಸು
ಇನ್ನು ನಾ ಸೋತೇನು
ಬೇಡಿತು ಮನವು
ಕಾಡಿತು ಒಲವು
ಸೇರು ನನ್ನನು..

ಪ್ರೀತಿಸು ಸಮೀಪಿಸು
ಪ್ರೀತಿಸು ಸಮೀಪಿಸು

ನೀ ಕೋಪ ತಾಳುತಾ ಹೀಗೇ
ದೂರಾಗಿ ಹೋದರೆ ಹೇಗೇ
ಶರಣಾಗಿ ಬಂದ ಮೇಲೆ
ಈ ಮೌನ ಏತಕೆ

ಆಹಾ ಆಹಾ ಆಹಾ..

Haayagi Seruva Vele
ಒಂದಾಗಿ ಬಾಳದ ಮೇಲೆ
ಸುಖ ಶಾಂತಿ ಕಾಣದಾಗ
ಈ ಬಾಳು ಏತಕೆ

ಪ್ರೀತಿಸು ಸಮೀಪಿಸು
ಪ್ರೀತಿಸು ಸಮೀಪಿಸು

ಕಣ್ಣೆರು ಕಾಣಿಸದೆನು
ನನ್ನಲ್ಲಿ ಬೇಸರವೇಣು
ಇರುಳೆಲ್ಲ ಹೀಗೇ ಇನ್ನು
ನಾ ನೋವ ತಾಳೆನು

ಆಹಾ ಓಹೋ ಹ್ಮ್..

ಮುಳ್ಳಾಗಿ ದೂರಕೆ ಹೋದೆ
ಹೂವಾಗಿ ಸೇರಲು ಬಂದೆ
ಪನ್ನೀರ ಚೆಲ್ಲಿ ಮನಕೆ
ಸವಿ ಮಾತಾನಾಡಿದೆ

ಪ್ರೀತಿಸು ಸಮೀಪಿಸು ಆಹಾ
ಇನ್ನು ನಾ ಸೋತೇನು ಓಹೋ
ಬೇಡಿತು ಮನವು
ಕಾಡಿತು ಒಲವು
ಸೇರು ನನ್ನನು..

ಪ್ರೀತಿಸು ಸಮೀಪಿಸು ಆಹಾ
ಇನ್ನು ನಾ ಸೋತೇನು ಓಹೋ
ಬೇಡಿತು ಮನವು
ಕಾಡಿತು ಒಲವು
ಸೇರು ನನ್ನನು..

ಲಲಾಲಾ ಲಾಲಾಲಾ.. ಹಹ್ಹ..