ಈ ಸೃಷ್ಟಿ ಎಂಥಾ - The Indic Lyrics Database

ಈ ಸೃಷ್ಟಿ ಎಂಥಾ

गीतकार - N.S. Lakshminarayana Bhatta, Dr. Siddhalingaiah | गायक - S. P. Balasubrahmanyam, Vani Jayaram | संगीत - L. Vaidyanathan | फ़िल्म - Yelu Suttina Kote | वर्ष - 1988

Song link

View in Roman

ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ
ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ

ಜಲ ಜಲ ಜಲ ಹರಿವ ನೀರ ಧಾರೇ
ಫಲ ಫಲ ಫಲ ಹೋಲೇವ ಕೋಟಿ ತಾರೇ
ಜಲ ಜಲ ಜಲ ಹರಿವ ನೀರ ಧಾರೇ
ಫಲ ಫಲ ಫಲ ಹೋಲೇವ ಕೋಟಿ ತಾರೇ

ಸಂಜೆ ಮುಗಿಲ ಸಾಲು ಸಾವಿರ ಜಾರಿ ಸೀರೆ |2|
ತೇಳುತ್ತಿದೆ ಬೆಳ್ಳಕ್ಕಿಯ ಮಾಲೆ

ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ

ನಮ್ಮ ದಲಿತ ಕವಿ ಸಿದ್ದಲಿಂಗಯ್ಯ ನವ್ರು ಏನ್ ಹೇಳಿದಾರೆ ಗೊತ್ತಾ

ಹೂ ಗಿಡ ಬಲ್ಲಿಗೆ ಬೆಂಕಿಯು ತಾಕಿ
ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ
ಚಿಮ್ಮುತ ಹರಿಯುತಿದೆ

ಹೂ ಗಿಡ ಬಲ್ಲಿಗೆ ಬೆಂಕಿಯು ತಾಕಿ
ಧಗ ಧಗ ಉರಿಯುತಿದೆ
ಬೀದಿ ಬೀದಿಯಲ್ಲಿ ಬಡವರ ರಕ್ತ
ಚಿಮ್ಮುತ ಹರಿಯುತಿದೆ

ಹಕ್ಕಿಯ ಕೊರಳಿಗೆ ಹಗ್ಗವು ಬಿಗಿದು
ಕಂಬನಿ ಸುರಿಯುತಿದೆ
ಹಸಿವಿನ ತಾಪ ತಾಳದೇ ಲೋಕ
ನಿಟ್ಟುಸಿರಾಡುತಿದೆ

ಶಿಖರದಿಂದ ಭೂಮಿಗಿಳಿವ ಬಿಸಿಲು
ಬಿಸಿಲ ಕಾಸಿ ತಾಕಿ ತಲೆದೂಗುವ ಹಸಿರು
ಶಿಖರದಿಂದ ಭೂಮಿಗಿಳಿವ ಬಿಸಿಲು
ಬಿಸಿಲ ಕಾಸಿ ತಾಕಿ ತಲೆದೂಗುವ ಹಸಿರು

ಗಾಳಿ ಎಂಬುದೆಲ್ಲ ಬರಿಯ ಸುಳ್ಳು ಹೆಸರು |2|
ನಿಜದಲಿ ಅದು ಭಗವಂತನ ಉಸಿರು

ಈ ಸೃಷ್ಟಿ ಎಂಥಾ ಚೆಲುವಿನಾಲಯ
ಸೌಂದರ್ಯದ ಈ ನೆಲೆ ದೇವಾಲಯ

ದುಡಿಯುವ ಕೈಗೆ ಕೆಲಸವೇ ಇಲ್ಲ
ಆಸೆಯು ಬರಡಾಗಿ
ದುಡಿಯುವ ಕೈಗೆ ಕೆಲಸವೇ ಇಲ್ಲ
ಆಸೆಯು ಬರಡಾಗಿ
ಬಾಳಿಗೆ ಭಾರವಸೆ ಬೆಳಕೆ ಇಲ್ಲಾ
ಜೀವನ ಕುರುಡಾಗಿ

ಬಿಸಿಲಿನ ಬೇಗೆಗೆ ಬಾಡಿದೆ ಜಗವು
ಭೂದಿಯು ತಾನಾಗಿ
ಬಡವರ ಪಾಲಿಗೆ ದೇವರೇ ಇಲ್ಲ
ಧನಿಕರ ವಶವಾಗಿ
ಬಡವರ ಪಾಲಿಗೆ ದೇವರೇ ಇಲ್ಲ
ಧನಿಕರ ವಶವಾಗಿ