ನಮ್ಮೂರ ಮಂದಾರ ಹೂವೇ - The Indic Lyrics Database

ನಮ್ಮೂರ ಮಂದಾರ ಹೂವೇ

गीतकार - Doddarange Gowda | गायक - S. P. Balasubrahmanyam | संगीत - C Ashwath, L Vaidyanathan | फ़िल्म - Aalemane | वर्ष - 1981

Song link

View in Roman

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಲದ ಚೆಲುವೆ
ಬಲಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಲದ ಚೆಲುವೆ
ಬಲಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೇ

ಕಣ್ಣಲ್ಲೇ ಕರೆದು ಹೊಂಗನಸ ತೇರು
ಸಂಗಾತಿ ಸಂಪ್ರೀತಿ ಸೆಲೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಬೆಳೆದೆ

ಕಣ್ಣಲ್ಲೇ ಕರೆದು ಹೊಂಗನಸ ತೇರು
ಸಂಗಾತಿ ಸಂಪ್ರೀತಿ ಸೆಲೆದೆ
ಅನುರಾಗ ಹೊಳೆದು ಅನುಬಂದ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸದ ಕಾರಂಜಿ ಬಿರಿದೆ
ಸೊಗಸದ ಕಾರಂಜಿ ಬಿರಿದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಲದ ಚೆಲುವೆ
ಬಲಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಒಡಲಾಳ ಮೋರೆದು ಒಡನಾಟ ಮೆರೆದು
ಒಡನಾಡಿ ಭಾಂದವ್ಯ ಕಂಡೆ
ರುತುಮಾನ ಮೀರ ಹೊಸಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಲದ ಚೆಲುವೆ
ಬಲಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ಬರಿದಾದ ಮನದಲ್ಲಿ ಮಿನುಗು