ತಂದೆ ಕೊಡಿಸೋ ಸೀರೆ - The Indic Lyrics Database

ತಂದೆ ಕೊಡಿಸೋ ಸೀರೆ

गीतकार - Hamsalekha | गायक - Dr. Rajkumar | संगीत - Hamsalekha | फ़िल्म - Midida Hrudayagalu | वर्ष - 1993

Song link

View in Roman

ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋ ವರೇಗೆ
ಬಂದು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರಿಗೆ
ಹೆಣ್ಣಿನ ಜನುಮ ಕಳೆವ ವರೆಗೆ
ಮಣ್ಣಿನ ಮಮತೆ ಮರೆವ ವರೆಗೆ

ಭೂಮಿ ಎಂದು ಜನ ಭಾರ ಎನ್ನುವುದಿಲ್ಲ
ತಾಯಿ ಎಂದು ತನ್ನ ಮಗು ಬಿಡುವುದಿಲ್ಲ
ಇದ್ದು ಸತ್ತ ಹಾಗೆ ಮಗು ಬಿಟ್ಟ ತಾಯಿ
ತಾಯಿಗಿಂತಾ ಇಲ್ಲಿ ದೊಡ್ಡದಿಲ್ಲ ಸ್ಥಾಯಿ

ಸೀತಾ ಮಾತೆ ಸ್ಥಾನ ಗಂಡನ ಅನುಸರಿಸಿದರೆ
ಗಂಗೆ ಗೌರಿ ಸ್ಥಾನ ಕಥೆಯ ಅನುಕರಿಸಿದರೆ
ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು
ಹುಟ್ಟು ಸಾವಿರ ನಂಟು
ಹೃದಯ ಮಿಡಿವವರಿಗೆ
ಪ್ರೇಮದ ತುತ್ತ ತುದಿಯವರಿಗೆ
ಬಾಳಿನ ಗುತ್ತು ತಿಳಿವವರಿಗೆ

ತಾ ನಾ ನಾ ತಾ ನಾ ತಂದನ್ನಾನೂ
ಓ ಓ ಓ ಓ ಓ ಓಹೋ

ಒಳ್ಳೆ ಮನಸು ಇದ್ದರೇನೆ ಕಷ್ಟವಂತೆ
ಕರಗೋ ಹೃದಯ ಇದ್ದರಂತು ಚಿಂತನೆಯಂತೆ
ಪ್ರೀತಿ ಹರಿವ ನೀರು ಒಡೆದ ಮನಸಿನಲ್ಲಿ
ಬಾಳು ಕಂಡ ನೀರು ಮಿಡಿದ ಹೃದಯದಲ್ಲಿ

ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ
ತಾಯಿ ಉಡಿಸೋ ಸೀರೆ ತಾಯಿ ಆಗೋ ವರೇಗೆ
ಬಂದು ಕೊಡಿಸೋ ಸೀರೆ ಬಣ್ಣ ಹೋಗೋವರೆಗೆ
ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ
ಹೆಣ್ಣಿನ ಜನುಮ ಕಳೆವ ವರೆಗೆ
ಮಣ್ಣಿನ ಮಮತೆ ಮರೆವ ವರೆಗೆ