ಆ ಸೂರ್ಯ ಚಂದ್ರ - The Indic Lyrics Database

ಆ ಸೂರ್ಯ ಚಂದ್ರ

गीतकार - M. N. Vyasa Rao | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Midida Shruthi | वर्ष - 1992

Song link

View in Roman

ಆ ಸೂರ್ಯ ಚಂದ್ರ ನಕ್ಷತ್ರ ಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲು ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ

ಆ ಸೂರ್ಯ ಚಂದ್ರ ನಕ್ಷತ್ರ ಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲು ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ

ಹೊಸ ಹಾದಿಗೆ ಇಂದು ಶೃತಿ ಸೇರಿದೆ
ಹೊಸ ಹಾದಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ
ಈ ಜೀವನ ಮಧುಮಯವಾಗಿದೆ

ಯುಗವೇ ಸಾಗಿ ಮರಳಿ ಬರಲಿ
ಹೃದಯ ಮೂಡುಪಾಗಿ ಇಡುವೆ
ಒಲವೆ ಸಾಕ್ಷಿ ಗೆಳತಿ ಕೇಳು
ಜೊತೆಗೇ ನಾನೆಂದು ಬರುವೆ
ಜಗವೇ ನೂಕಿ ಸಿಡಿದರೇನು
ನೆಲವೇ ಸೀಳಿ ಬಿರಿದರೆನು
ಬದುಕು ಎಂದಂದು ನೀನಾಗಿದೆ

ಈ ಮಾತಿನಲಿ ನಿನ್ನ ಪ್ರೀತಿಯಲಿ
ಅರಳಿತು ಒಲವಿನ ಕಾವ್ಯ
ಆ ಬಾಲಿನಲಿ ನಿನ್ನ ಮೊಹದಲಿ
ಮಧುವಿಗೆ ತುದಿಯಿತು ಜೀವ
ನನ್ನ ಬಾನಿನಲಿ ನೀನೆ ಚಂದ್ರಮನು
ಒಲುಮೆ ಸುರಿದು ಕಿರಣ ಹಾರಾಡಿ ಬೆಳಗುವೆ

ಆ ಸೂರ್ಯ ಚಂದ್ರ ನಕ್ಷತ್ರ ಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲು ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ

ಹಾಗಲು ರಾತ್ರಿ ನೆನಪು ಮೀಟಿ
ಕನಸು ನೀ ತುಂಬಿ ನಗುವೆ
ಮುಗಿಲ ಕಂಡ ನವಿಲ ಹಾಗೆ
ನಿನಗೆ ನಾ ಕಾಯುತ್ತಿರುವೆ
ಹೃದಯ ವೀಣೆ ಮಿಡಿದ ಶೃತಿಗೆ
ಒಳಗಿನಾಸೆ ಚಿಗುರಿತೆಕೆ
ಎದೆಯ ಬಾನಾಡಿ ಹಾರಾಡಿದೇ

ಈ ಜೀವದಲಿ ನನ್ನ ಪ್ರಾಣದಲಿ
ಹುರುಪನು ತರಿಸಿದೆ ನೀನು
ವ್ಯಾಮೋಹದಲಿ ನಿನ್ನ ದಾಹದಲಿ
ಅನುದಿನ ತಪಿಸುವೆ ನಾನು
ನನ್ನ ತೋಳಿನಲಿ ನಿನ್ನ ಬಂದಿಸುವೆ
ಪ್ರಣಯಭರಿತ ಮಧುರ ನಾವಿರು ತರಿಸುವೆ

ಆ ಸೂರ್ಯ ಚಂದ್ರ ನಕ್ಷತ್ರ ಮಾಲೆ
ಬಂದಂತೆ ಬಂದೆ ನೀನು
ಈ ಚೈತ್ರದಲ್ಲಿ ಆ ಬಣ್ಣದಲ್ಲಿ
ಎಲ್ಲೆಲ್ಲು ಕಂಡೆ ನೀನು
ಅದೇನೋ ಸಂತೋಷ ಇಂದೇಕೋ ಉಲ್ಲಾಸ

ಹೊಸ ಹಾದಿಗೆ ಇಂದು ಶೃತಿ ಸೇರಿದೆ
ಹೊಸ ಹಾದಿಗೆ ಇಂದು ಶೃತಿ ಸೇರಿದೆ
ಈ ಜೀವನ ಮಧುಮಯವಾಗಿದೆ
ಈ ಜೀವನ ಮಧುಮಯವಾಗಿದೆ