ನನ್ನನು ತುಂಬ ಪ್ರೀತಿಸುವ - The Indic Lyrics Database

ನನ್ನನು ತುಂಬ ಪ್ರೀತಿಸುವ

गीतकार - Hamsalekha | गायक - S. Janaki | संगीत - Hamsalekha | फ़िल्म - Kadambari | वर्ष - 1993

Song link

View in Roman

ನನ್ನನು ತುಂಬ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ
ಬೇಗನೇ ಬರುವೆ ಎಂದಿರುವ
ಕಾದಿರು ಇಲ್ಲೆ ಅಂದಿರುವಾ

ನನ್ನನು ತುಂಬ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ
ಬೇಗನೇ ಬರುವೆ ಎಂದಿರುವ
ಕಾದಿರು ಇಲ್ಲೆ ಅಂದಿರುವಾ

ಕಾಯುವೆ ನಾನಿಲ್ಲೆ ಕಾಯುವೆ ನಾನಿಲ್ಲೆ
ತೀರದ ಜೊತೆಯಲ್ಲಿ
ನನ್ನನು ತುಂಬ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ
ಬೇಗನೇ ಬರುವೆ ಎಂದಿರುವ
ಕಾದಿರು ಇಲ್ಲೆ ಅಂದಿರುವಾ

ಲಲ್ಲಾಲಾ ಲಾಲಾ ಲಲಾಲಾ ಲಾಲಾ ಲಾಲಾ
ಲಲ್ಲಾಲಾ ಲಾಲಾ ಲಾಲಾ
ಲಲ್ಲಾಲಾ ಲಾಲಾ ಲಲಾಲಾ ಲಾಲಾ ಲಾಲಾ
ಲಲ್ಲಾಲಾ ಲಾಲಾ ಲಾಲಾ

ನಲ್ಲನೂ ನಾನೂ ಪ್ರೀತಿಸಿದ
ಚಿತ್ರವ ಗಗನ ಚಿತ್ರಿಸಿದೆ
ಆಡಿದ ಮಾತು ಹಾಡುಗಳು
ತಂಬೆಲರಳ್ಳಿ ಮುದ್ರಿಸಿದೆ
ಕಣ್ಣಿಗೆ ಕಾಣದ ದೇವರಂತೆ
ಕಯ್ಯಿಗೆ ನಿಲುಕದ ನಾಡದಂತೆ
ಎಲ್ಲೆಲ್ಲು ನಮ್ಮ ಪ್ರೇಮವಿದೆ
ಪ್ರೇಮಕ್ಕೆ ನಮ್ಮ ಭಾಷೆಯಿದೆ
ಕಾಯುವೆ ನಾನಿಲ್ಲಿ ಕಾಯುವೆ ನಾನಿಲ್ಲಿ
ಭಾಷೆಯ ಜೊತೆಯಲ್ಲಿ

ನನ್ನನು ತುಂಬ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ
ಬೇಗನೇ ಬರುವೆ ಎಂದಿರುವ
ಕಾದಿರು ಇಲ್ಲೆ ಅಂದಿರುವಾ

ತೀರದ ಮೇಲೆ ನಮ್ಮಿಬ್ಬರ
ಹೆಜ್ಜೆಯ ಗುರುತ ಕಂಡಿಹಿರಾ
ನೀರಿನಾ ಅಲೆಯಲಿ
ನಮ್ಮಯ್ಯ ಹೆಸರ ಓದಿಹಿರಾ
ಬಾಳಿನ ನೆನಪಿನ ತೋಟದಲ್ಲಿ
ಬೀಸುವ ಕಂಪಿನ ಗಾಳಿಯಲ್ಲಿ
ಜೇನಿನ ಮಾತು ಕೇಳಿಸದೆ
ಪ್ರೇಮದ ಲಾಲಿ ಆಲಿಸದೆ
ಕಾಯುವೆ ನಾನಿಲ್ಲಿ ಕಾಯುವೆ ನಾನಿಲ್ಲಿ
ಗಾಳಿಯ ಜೊತೆಯಲ್ಲಿ

ನನ್ನನು ತುಂಬ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ
ಬೇಗನೇ ಬರುವೆ ಎಂದಿರುವ
ಕಾದಿರು ಇಲ್ಲೆ ಅಂದಿರುವಾ

ಕಾಯುವೆ ನಾನಿಲ್ಲಿ ಕಾಯುವೆ ನಾನಿಲ್ಲಿ
ಅಲೆಗಳ ಜೊತೆಯಲ್ಲಿ

ನನ್ನನು ತುಂಬ ಪ್ರೀತಿಸುವ
ಸ್ನೇಹಿತ ದೂರ ಹೋಗಿರುವಾ