ಪಂಜರದ ಓ ಗಿಣಿಯೇ - The Indic Lyrics Database

ಪಂಜರದ ಓ ಗಿಣಿಯೇ

गीतकार - R. N. Jayagopal | गायक - S. P. Balasubrahmanyam, K. S. Chithra | संगीत - M. M. Keeravani | फ़िल्म - Swathi | वर्ष - 1994

Song link

View in Roman

ಪಂಜರದ ಓ ಗಿಣಿಯೇ
ಕಣ್ಣನು ಮುಚ್ಚಿದ ಅಲ್ಲಿ ಸರಿಸಿ ಪ್ರಕೃತಿಯ ನೀನೊಡು
ಬಂಧನದಿ ಯೇಕಿರುವೆ ಬಾನಲಿನ ಸುಂದರ ಬಾನಲಿ ಹರುತ ನೀ ಹಾಡು
ಇನ್ನು ಈ ಮೌನ ನಿನಗೇಕೆ ಹೀಗೆ ನೀ ಅಂಜಿ ನಿಲಲೇಕೆ
ಇನ್ನು ಈ ಮೌನ ನಿನಗೇಕೆ ಹೀಗೆ ನೀ ಅಂಜಿ ನಿಲಲೇಕೆ
ಬಾ ತೋರಿಸುವೆ ಈ ಜಗದ ಅಂದ ಚಂದವ

ಪಂಜರದ ಓ ಗಿಣಿಯೇ
ಕಣ್ಣನು ಮುಚ್ಚಿದ ಅಲ್ಲಿ ಸರಿಸಿ ಪ್ರಕೃತಿಯ ನೀನೊಡು

ತೆಂಗು ನಿನ್ನ ಕೈ ಬೀಸಿ ಬಲಿ ಕರೆದಿದೆ ಬಾ ಬಾ ಎಂದು
ದಾರಿಯಲ್ಲಿ ಹೂ ಹಸಿ ಸುಖ ಸ್ವಾಗತ ನಿನಗೆಂದು
ತಂಪು ಗಾಳಿ ತಾ ಬೀಸಿ ಹೊಸ ಚೇತನ ತಂದಿದೆ ಇಲ್ಲಿ
ಜೋಡಿ ಹಕ್ಕಿ ಹಾಡುತಿದೆ ಶೃತಿ ತಾಳದ ಸ್ವರದಲ್ಲಿ
ಈ ಸೃಷ್ಟಿ ಅಂದ ಕಣ್ಣ ಬಿಟ್ಟು ನೋಡು ಆ ಹಕ್ಕಿ ಹಾಗೆ ನೀನು ಹಾಡು
ಇನ್ನು ನೀ ಶಂಕೆ ಬಿಡಬೇಕು ಮುಂದೆ ನೀ ಹೆಜ್ಜೆ ಇಡಬೇಕು
ನೀ ಹೊಸ ಕಥೆಯ ಬಾರೆ ಗೆಳೆಯ ಇಂದು ಧೈರ್ಯದಿ

ಪಂಜರದ ಓ ಗಿಣಿಯೇ
ಕಣ್ಣನು ಮುಚ್ಚಿದ ಅಲ್ಲಿ ಸರಿಸಿ ಪ್ರಕೃತಿಯ ನೀನೊಡು
ಬಂಧನದಿ ಯೇಕಿರುವೆ ಬಾನಲಿನ ಸುಂದರ ಬಾನಲಿ ಹರುತ ನೀ ಹಾಡು

ನೋಡು ಬಂತು ಮೆರವಣಿಗೆ ಹೊಸ ದಂಪತಿ ಜೋಡಿಯಲ್ಲಿ
ಮೇಳ ತಾಳ ಜೊತೆಗೂಡಿ ನವರಾಗದ ಅಲೆಯಲ್ಲಿ
ಸ್ನೇಹ ಬೇಕು ಬಾಳಲ್ಲಿ ಇದೇ ಜೀವಕೆ ಅರ್ಥ ನೋಡು
ಧೈರ್ಯ ಬೇಕು ಮನದಲ್ಲಿ ಈ ಸಂಕಲೆ ನೀ ದೂಡು
ಬಂಗಾರದ ಗೂಡು ಸುಖ ಕೊಡದೆಂದು
ಸ್ವಚ್ಛಂದ ಬಾಲೆ ಸ್ವರ್ಗ ಎಂದೆಂದು
ಇನ್ನು ಸಂದೇಹ ನನಗಿಲ್ಲ ನಿನ್ನ ಸಂದೇಶ ಸಮವಿಲ್ಲ
ಹೊಸ ದೀಪವನು ತೋರಿದೆ ಬಾಳ ದಾರಿಗೆ

ಪಂಜರದ ಗಿಣಿಯಲ್ಲ
ಕಣ್ಣನು ಮುಚ್ಚಿದ ಅಲ್ಲಿ ಸರಿಸಿ ಹರಿದೆ ನಾ ಮೇಲೆ
ಬಂಧನವು ಇನ್ನಿಲ್ಲ ಬಾಳಿನ ಸುಂದರ ಬಾಳಿನಲಿ ಆಡುವೆ ಉಯ್ಯಾಲೆ