ಸುರಿವ ಮಳೆಯಲಿ - The Indic Lyrics Database

ಸುರಿವ ಮಳೆಯಲಿ

गीतकार - Shyamsundar Kulkarni | गायक - S. P. Balasubrahmanyam, K. S. Chithra | संगीत - M. M. Keeravani | फ़िल्म - Swathi | वर्ष - 1994

Song link

View in Roman

ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬೇಕೆಯು ನಿನ್ನಯ ತೊಳಲಿ
ಒಂಟಿಯಾಗಿ ಬಾರೆ ನೀ ಪ್ರೀತಿಸು ಮನಸಾರೆ
ಬೇಗ ನನ್ನನು ಸೇರೆ ನಾ ತಾಳೆನು ಜಲಧಾರೆ
ಈ ಚುಂಬನ ರೋಮಾಂಚನ

ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬೇಕೆಯು ನಿನ್ನಯ ತೊಳಲಿ

ಬದುಕಲಿ ಹೊಸತು ಬೆಳಕು ತೋರಿ ಬಾಳಿಗೆ ನೀನು ಸೆಳೆದೆ
ಪ್ರೀತಿಯ ಮಧುರ ಮಾಲೆಯ ಸುಖದ ಸುಧೆಯ ಇಂದು ಸವಿದೆ
ಪರಿಚಯ ಪ್ರೇಮವಾಯಿತು ಸಾಲುಗೆಯು ಮೂಡಿತು
ಹೃದಯವು ಕೂಗಿ ಹಾಡಿತ್ ನಿದಿರೆಯು ಹಾರಿತು
ಈ ಪ್ರೀತಿಯ ಈ ಸೇತುವೆ ಸೇರದ ದಡಗಳ ಬೆಸೆಯಿತು

ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬೇಕೆಯು ನಿನ್ನಯ ತೊಳಲಿ

ಒಲವಿನ ಜಗದ ಸಿರಿಯ ಗೆಳೆಯ ನಿನ್ನ ಸಂಘ ಪಡೆದೆ
ಮಲಗಿದ ಬೇಕೆ ಹೆದರೆ ಕೆಣಕಿ ಮನವ ನೀನು ಮಿಡಿದೆ
ಮಿಲನದ ಭಾವ ಕಾಡಿತು ಸಂಯಮ ಜಾರಿತು
ಎಲ್ಲೆ ಮೇರೆ ಮೀರಿತು ತನುವಿದು ಸೇರಿತು
ಸಂಗಾತಿಯ ಸಂತೋಷದಿ ನನ್ನಯ ಬಾಳಿನ ಆಸೆಯು

ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬೇಕೆಯು ನಿನ್ನಯ ತೊಳಲಿ
ಒಂಟಿಯಾಗಿ ಬಾರೋ ನೀ ಪ್ರೀತಿಸು ಮನಸಾರೆ
ಈ ಚುಂಬನಾ ರೋಮಾಂಚನ ಈ ಚುಂಬನಾ ರೋಮಾಂಚನ