ಒಂಥರಾದಲ್ಲಿ ಎಲ್ಲ ಹಾಯಾಗಿದೆ - The Indic Lyrics Database

ಒಂಥರಾದಲ್ಲಿ ಎಲ್ಲ ಹಾಯಾಗಿದೆ

गीतकार - Yogaraj Bhat | गायक - Karthik | संगीत - V. Harikrishna | फ़िल्म - Bruhaspati | वर्ष - 2018

Song link

View in Roman

ಒಂಥರಾದಲ್ಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
ಎಷ್ಟೆಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕು
ನಿನ್ನ ಜೊತೆಗೇ ಕುಂತು ಯಥಾಕೋ ನನಗಂತು
ಸುಮ್ಮನೆ ನಗು ಬಂತು ಹೇಳದೆ ಕೇಳದೆ

ಒಂಥರಾದಲ್ಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ

ಘಮ ಎನ್ನುತಿದೆ ಮನವು ಹೂವಾಗಿ
ಜುಂ ಎನ್ನುತಿದೆ ಕೈಬೇರಲು ತಾವಾಗಿ
ಘಮ ಎನ್ನುತಿದೆ ಮನವು ಹೂವಾಗಿ
ಜುಂ ಎನ್ನುತಿದೆ ಕೈಬೇರಲು ತಾವಾಗಿ
ಯಾರು ಕಲಿಸದೆ ಕೆಲವು ತುಂಟ ಮಾತು
ನಿನ್ನ ನೋಡುತ ಕುಳಿದು ಕಲಿತುಕೊಂಡೆನು
ನಾನಾಗಿರಲು ಈ ಖಾಲಿ ಗಂಟಲಿಗೆ
ಏಳನೆ ಸ್ವರ ಬಂತು ಹೇಳದೆ ಕೇಳದೆ

ಒಂಥರಾದಲ್ಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ

ನೆಂದಿರುವೆನು ನಾ ಎಂದೋ ಮಳೆಯಲ್ಲಿ
ನೀನು ಪಡೆಯುವೆಯಾ ಶೀತವನು ಪ್ರೀತಿಯಲ್ಲಿ
ನೆಂದಿರುವೆನು ನಾ ಎಂದೋ ಮಳೆಯಲ್ಲಿ
ನೀನು ಪಡೆಯುವೆಯಾ ಶೀತವನು ಪ್ರೀತಿಯಲ್ಲಿ
ತಪ್ಪೇ ಆದರು ಪರವಾಗಿಲ್ಲ ಈಗಲೇ
ಕೊಬ್ಬು ಕರಗಿದ ಗಲಿಗೆ ನೋಡಿ ತಬ್ಬಲೆ
ಹುಚ್ಚ ನಾನಾಗಿರಲು ಬೆಚ್ಚನೆ ತುಟಿಗಳಲಿ
ಮುತ್ತಿನ ಮಳೆ ಬಂತು ಹೇಳದೆ ಕೇಳದೆ

ಒಂಥರಾದಲ್ಲಿ ಎಲ್ಲ ಹಾಯಾಗಿದೆ
ಇನ್ನೊಂಥರದಲಿ ಹೃದಯ ಬಾಯಾರಿದೆ
ಎಷ್ಟೆಳೆದರು ಉಸಿರು ಸಾಕಾಗದೆ
ಕುಂತಿರುವೆನು ಹೆಸರು ಬೇಕು
ನಿನ್ನ ಜೊತೆಗೇ ಕುಂತು ಯಥಾಕೋ ನನಗಂತು
ಸುಮ್ಮನೆ ನಗು ಬಂತು ಹೇಳದೆ ಕೇಳದೆ