ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ - The Indic Lyrics Database

ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ

गीतकार - Nagathihalli Chandrashekar | गायक - S. P. Balasubramanyam | संगीत - Hamsalekha | फ़िल्म - Baa Nalle Madhuchandrake | वर्ष - 1993

Song link

View in Roman

ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ
ಬಂದಾಲೋ ಬಂದಾಲೋ ಚಂದಿರ ಚಕೋರಿ
ತಂದಾಲೋ ತಂದಾಲೋ ತಂದಾಲೋ ಪ್ರೇಮದ ಸಿರಿ
ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ
ಬಂದಾಲೋ ಬಂದಾಲೋ ಚಂದಿರ ಚಕೋರಿ

ಮಲೆಬಿಲ್ಲ ಮೇಲೆ ಇಳಿದಾರೋ ಬಾಲೆ
ರತೀದೇವಿ ಸೌಂದರ್ಯ ಸವತಿ ನೀ
ಕವಿತೆ ನೀ ಕಾಯುವ ಸ್ಪೂರ್ತಿ ನೀ
ಯೆಡೆಯಾಳದೊಳವು ಹೆಣ್ಣಾಗಿ ಬಂದಾ
ಭೂಲೋಕ ಸೌಂದರ್ಯ ರಾಣಿ ನೀ
ಪ್ರಾಣ ನೀ ನೀಲವೇಣಿ ನೀ
ನಕ್ಕಲೋ ನಕ್ಕಲೋ ಹುಣ್ಣಿಮೆ ಹಾಲಂತೆ
ಉಕ್ಯಾಲೋ ಉಕ್ಯಾಲೋ ತುಂಗೆಯ ನೀರಂತೆ
ಜೀವನದ ಚಂದ್ರೋದಯಕೆ
ಮೈ ಮನದ ಪ್ರಾಣಾಲಯಕೆ

ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ
ಬಂದಾಲೋ ಬಂದಾಲೋ ಚಂದಿರ ಚಕೋರಿ
ತಂದಾಲೋ ತಂದಾಲೋ ತಂದಾಲೋ ಪ್ರೇಮದ ಸಿರಿ
ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ
ಬಂದಾಲೋ ಬಂದಾಲೋ ಚಂದಿರ ಚಕೋರಿ

ಮಲೆನಾಡ ಸಿರಿಗೆ ಮನಸೋತು ನಿಂತ
ಹಸಿರೂರ ಗಿರ್ಬಾಳೆ ಹೆಣ್ಣು ನೀನು
ಕಣ್ಣು ನೀ ಬಾಳ ಬಣ್ಣ ನೀ
ನಡುರಾತ್ರಿಯಲ್ಲಿ ಜಲರಾಶಿ ಮೇಲೆ
ಗುರಿ ತೋರೋ ಯೇಕಾಂತ ತಾರೆ ನೀ
ನೀರೆ ನೀ ಕಾವ್ಯಧಾರೆ ನೀ
ಮೂಡ್ಯಾಲೋ ಮೂಡ್ಯಾಲೋ ಮಾಗಿಯ ಕನಸಂತೆ
ಮುತ್ಯಾಲೋ ಮುತ್ಯಾಲೋ ಬೆಚ್ಚನೆ ಮುತ್ತಂತೆ
ಜೀವನದ ಚಂದ್ರೋದಯಕೆ
ಮೈ ಮನದ ಪ್ರಾಣಾಲಯಕೆ

ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ
ಬಂದಾಲೋ ಬಂದಾಲೋ ಚಂದಿರ ಚಕೋರಿ
ತಂದಾಲೋ ತಂದಾಲೋ ತಂದಾಲೋ ಪ್ರೇಮದ ಸಿರಿ
ಬಂದಾಲೋ ಬಂದಾಲೋ ಬಿಂಕದ ಸಿಂಗಾರಿ
ಬಂದಾಲೋ ಬಂದಾಲೋ ಚಂದಿರ ಚಕೋರಿ